ಸುರತ್ಕಲ್: ಲಾರಿ ಮಗುಚಿಬಿದ್ದು ಕಾರು ಜಖಂ, ಚಾಲಕ ಮೃತ್ಯು

ಸುರತ್ಕಲ್: ರಸ್ತೆ ದಾಟಲೆಂದು ನಿಂತಿದ್ದ ಕಾರೊಂದರ ಮೇಲೆಯೇ ಹಿಂದಿನಿಂದ ಬಂದ ಲಾರಿ ಮಗುಚಿ ಬಿದ್ದು ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆಯೊಂದು ನಗರದ ಸುರತ್ಕಲ್ ಬಳಿಯ ಹೊನ್ನಕಟ್ಟೆ ಸಿಗ್ನಲ್ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ನಗರದ ಕುಳಾಯಿ ಗೋಕುಲನಗರ ನಿವಾಸಿ ಲೋಕನಾಥ ಮೃತಪಟ್ಟ ದುರ್ದೈವಿ.

ಲೋಕನಾಥ ಅವರು ಸುರತ್ಕಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 66ರ ಹೊನ್ನಕಟ್ಟೆ ಸಿಗ್ನಲ್ ನಲ್ಲಿ ರಸ್ತೆ ದಾಟಲೆಂದು ಕಾರು ನಿಲ್ಲಿಸಿದ್ದರು. ಈ ವೇಳೆ ಹಿಂಭಾಗದಿಂದ ಬಂದ ಲಾರಿಯೊಂದು ನಿಯಂತ್ರಣ ತಪ್ಪಿ ಕಾರಿನ ಮೇಲೆಯೇ ಏಕಾಏಕಿ ಮಗುಚಿ ಬಿದ್ದಿದೆ. ಪರಿಣಾಮ ಕಾರು ಸಂಪೂರ್ಣ ಜಖಂಗೊಂಡು ಕಾರಿನೊಳಗಿದ್ದ ಲೋಕನಾಥ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಲಾರಿ ಬಿದ್ದ ರಭಸಕ್ಕೆ ಕಾರಿನ ಮುಂಭಾಗದಲ್ಲಿದ್ದ ದ್ವಿಚಕ್ರ ವಾಹನವೂ ಹಾನಿಯಾಗಿದೆ‌. ಆದರೆ ತಕ್ಷಣ ದ್ವಿಚಕ್ರ ವಾಹನ ಸವಾರ ತನ್ನ ಸ್ಕೂಟರ್‌ ಬಿಟ್ಟು ಓಡಿದ ಪರಿಣಾಮ ಮತ್ತೊಂದು ಜೀವ ಬಲಿಯಾಗುವುದು ತಪ್ಪಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ವಿಭಾಗದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu