
ಮಕರ ರಾಶಿಗೆ ಶನಿಯ ಪ್ರವೇಶ!! ಈ 5 ರಾಶಿಗಳ ಮೇಲೆ ಶನಿಯ ಮಹಾದೆಸೆ ಆರಂಭ..
ಶನಿಯು ಮಕರ ರಾಶಿಯನ್ನು ಪ್ರವೇಶಿಸಿದ ಕೂಡಲೇ 5 ರಾಶಿಯವರಿಗೆ ಶನಿ ಸಾಡೆಸಾತಿ ಪ್ರಾರಂಭವಾಗಲಿದೆ. ಇನ್ನು ಕೆಲವು ರಾಶಿಯವರಿಗೆ ಶನಿಗ್ರಹದ ಮಹಾದೆಸೆಯಿಂದ ಮುಕ್ತಿ ಕೂಡಾ ಸಿಗಲಿದೆ.
ಮಕರ ರಾಶಿಯಲ್ಲಿ ಶನಿಯ ಸಂಚಾರವಾಗುವುದರೊಂದಿಗೆ ಧನು ರಾಶಿಯವರಿಗೆ ಸಾಡೇಸಾತಿ ಆರಂಭವಾಗಲಿದೆ. ಇದರೊಂದಿಗೆ ಕುಂಭ, ಮತ್ತು ಮಕರ ರಾಶಿಯವರಿಗೂ ಸಾಡೇ ಸಾತಿಯ ಪರಿಣಾಮ ಗೋಚರಿಸಲಿದೆ. ಇನ್ನು ಮಿಥುನ ಮತ್ತು ತುಲಾ ರಾಶಿಯವರನ್ನು ಕೂಡಾ ಶನಿದೇವ ಕಾಡಲಿದ್ದಾನೆ. ಮತ್ತೊಂದೆಡೆ, ಕರ್ಕಾಟಕ ಮತ್ತು ವೃಶ್ಚಿಕ ರಾಶಿಯವರಿಗೆ ಶನಿ ಧೈಯಾದಿಂದ ಮುಕ್ತಿ ಸಿಗಲಿದೆ.
ಶನಿಯ ವಕ್ರ ದೃಷ್ಟಿ ಯಾವ ವ್ಯಕ್ತಿಯ ಮೇಲೆ ಬೀಳುತ್ತದೆಯೋ ಅವರಿಗೆ ಆರ್ಥಿಕವಾಗಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ಮೂರೂ ರೀತಿಯಲ್ಲಿ ಕಿರುಕುಳ ಆರಂಭವಾಗುತ್ತದೆ. ಅವರ ಯಶಸ್ಸಿನ ಹಾದಿ ಕೂಡಾ ಮುಚ್ಚುತ್ತದೆ. ಹಣಕಾಸಿನ ನಷ್ಟ ಎದುರಾಗುತ್ತದೆ. ಆರೋಗ್ಯ ಮತ್ತು ಸಂಬಂಧಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.