
ಚಲಿಸುತ್ತಿರುವ ಬಸ್ ನಲ್ಲೇ ಬಾಲಕಿಯ ಮೇಲೆ ಪೈಶಾಚಿಕ ಕೃತ್ಯವನ್ನು ಎಸಗಿರುವ ನಾಲ್ವರು ಕಾಮುಕರು ಅರೆಸ್ಟ್
6/08/2022 07:51:00 AM
ಪಾಟ್ನಾ: ಚಲಿಸುತ್ತಿದ್ದ ಬಸ್ ನಲ್ಲಿಯೇ 17ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿರುವ ಘಟನೆ ಬಿಹಾರದಲ್ಲಿ ಮಂಗಳವಾರ ನಡೆಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ ಪೊಲೀಸರು ಬಂಧಿಸಿದ್ದಾರೆ.
ಬಾಲಕಿ ಪಶ್ಚಿಮ ಚಂಪಾರಣ್‌ನ ಬೆಟ್ಟಿಯಾ ಎಂಬ ಸ್ಥಳಕ್ಕೆ ತೆರಳಲೆಂದು ಬಸ್‌ಗಾಗಿ ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿ ನಿಲ್ದಾಣದಲ್ಲಿ ಕಾಯುತ್ತಿದ್ದಳು. ಆಗ ಈ ಬಸ್ ಚಾಲಕ ಬೆಟ್ಟಿಯಾಗೆ ಹೋಗುವುದಾಗಿ ಹೇಳಿದ್ದಾನೆ. ಅವಳು ಬಸ್ ಹತ್ತಿದ ಬಳಿಕ ಪ್ರಜ್ಞೆ ತಪ್ಪುವ ಪದಾರ್ಥ ಕುಡಿಸಿ ಕೃತ್ಯ ಎಸಗಲಾಗಿದೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ (ಬೆಟ್ಟಿಯಾ-ಸದರ್ ) ಮುಕುಲ್ ಪಾಂಡೆ ಹೇಳಿದರು.
ಘಟನೆಯ ಬಳಿಕ ಬಾಲಕಿಯನ್ನು ಬಸ್ ನೊಳಗೆ ಲಾಕ್ ಮಾಡಿ ಕಾಮುಕರು ಪರಾರಿಯಾಗಿದ್ದರು. ಆಕೆಗೆ ಪ್ರಜ್ಞೆ ಬಂದು ಕೂಗಿಕೊಂಡಾಗ ಸ್ಥಳೀಯರು ಬಾಗಿಲು ತೆಗೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಕೃತ್ಯದಲ್ಲಿ ಭಾಗಿಯಾಗಿದ್ದ ಬಸ್ ಚಾಲಕ, ಕಂಡಕ್ಟರ್ ಸೇರಿದಂತೆ ನಾಲ್ವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.