'ಬೀಸ್ಟ್' ಸಿನಿಮಾ ನೆಲಕಚ್ಚಿದ ಬಳಿಕ ನಿರ್ಮಾಪಕರಿಂದ ಬಂದಿರುವ ಬಿಲ್ ನೋಡಿ ನಟಿ 'ಪೂಜಾ ಹೆಗ್ಡೆ' ಶಾಕ್

ಚೆನ್ನೈ: ವಿಜಯ್ ಅಭಿನಯದ 'ಬೀಸ್ಟ್' ಸಿನಿಮಾ ಸೇರಿದಂತೆ ಟಾಲಿವುಡ್ ಬೆಡಗಿ ಪೂಜಾ ಹೆಗ್ಡೆ ಅಭಿನಯದ ಮೂರು ಸಿನಿಮಾಗಳು ನೆಲಕಚ್ಚಿದರೂ ಅವರಿಗೆ ಬೇಡಿಕೆ ಕಿಂಚಿತ್ತೂ ಕಡಿಮೆಯಾಗಿಲ್ಲ. ಬೀಸ್ಟ್ ಸಿನಿಮಾ ಕೆಜಿಎಫ್-2 ಸಿನಿಮಾ ಎದುರು ಸಂಪೂರ್ಣ ಮಕಾಡೆ ಮಲಗಿತು. ಪರಿಣಾಮ ನಿರ್ಮಾಪಕರ ಜೇಬಿಗೆ ಕುತ್ತು ಬಿದ್ದಿತ್ತು. ಇದೀಗ ಕೇಳಿ ಬಂದಿರುವ ಸುದ್ದಿ ಏನೆಂದರೆ ಪೂಜಾ ಹೆಗ್ಡೆ ಸಿಬ್ಬಂದಿಯ ನಿರ್ವಹಣೆಯ ಖರ್ಚು ಭರಿಸಲಾಗದೆ ನಿರ್ಮಾಪಕರು ಈ ಬಿಲ್ ಅನ್ನು ವಾಪಸ್ ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ.

ಬೀಸ್ಟ್ ಶೂಟಿಂಗ್ ಸಮಯದಲ್ಲಿ ಪೂಜಾ ಹೆಗ್ಡೆ ಸಿಬ್ಬಂದಿ ಸಖತ್ ಖರ್ಚು ಮಾಡಿದ್ದಾರೆ. ಊಟಕ್ಕಾಗಿಯೇ ಲಕ್ಷಾಂತರ ರೂ. ಖರ್ಚು ಮಾಡಿದ್ದಾರೆ‌. ಇದರ ಬಿಲ್ ನೋಡಿ ನಿರ್ಮಾಪಕರೇ ಶಾಕ್ ಆಗಿದ್ದಾರಂತೆ. ಈಗಾಗಲೇ ಬೀಸ್ಟ್ ಸಿನಿಮಾ ಸೋಲಿನಿಂದ ಕಂಗೆಟ್ಟಿರುವ ನಿರ್ಮಾಪಕರು ಪೂಜಾ ಹೆಗ್ಡೆ ಸಿಬ್ಬಂದಿಯ ಖರ್ಚು-ವೆಚ್ಚವು ಗಾಬರಿ ತರಿಸಿದೆಯಂತೆ. ಆದ್ದರಿಂದ ಈ ಬಿಲ್ ಗಳನ್ನು ಅವರು ಪೂಜಾ ಹೆಗ್ಡೆಗೆ ಕಳುಹಿಸಿ ಬಿಲ್ ಪಾವತಿಸುವಂತೆ ಸೂಚಿಸಿದ್ದಾರಂತೆ.

ನಿರ್ಮಾಪಕರು ಕಳುಹಿಸಿರುವ ಬಿಲ್ ಮೊತ್ತ ನೋಡಿ ಪೂಜಾ ಹೆಗ್ಡೆಯವರು ಶಾಕ್ ಗೆ ಒಳಗಾಗಿದ್ದಾರಂತೆ. ಅಲ್ಲದೆ ಬಿಲ್ ಮೊತ್ತವನ್ನು ಪಾವತಿಸುವುದಾಗಿಯೂ ಅವರು ಹೇಳಿದ್ದಾರಂತೆ.