-->
ಡಾಲರ್ ಎದುರು ಮುಗ್ಗರಿಸಿದ ರೂಪಾಯಿ: ಇದಕ್ಕೆ ಕಾರಣವೇನು ಗೊತ್ತೇ..?

ಡಾಲರ್ ಎದುರು ಮುಗ್ಗರಿಸಿದ ರೂಪಾಯಿ: ಇದಕ್ಕೆ ಕಾರಣವೇನು ಗೊತ್ತೇ..?

ಡಾಲರ್ ಎದುರು ಮುಗ್ಗರಿಸಿದ ರೂಪಾಯಿ: ಇದಕ್ಕೆ ಕಾರಣವೇನು ಗೊತ್ತೇ..?


ಭಾರತದ ಕರೆನ್ಸಿ 'ರೂಪಾಯಿ' ಡಾಲರ್ ಎದುರು ಮುಗ್ಗರಿಸಿದೆ. ರೂಪಾಯಿ ಡಾಲರ್ ವಿರುದ್ಧ 77.24 ನಲ್ಲಿ ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪಿದೆ.ರೂಪಾಯಿ ನಿರಂತರವಾಗಿ ಡಾಲರ್ ಎದುರು ಕುಸಿತ ಕಾಣುತ್ತಿದೆ. ಸತತ ಮೂರನೇ ದಿನ ರೂಪಾಯಿ ನಷ್ಟದಲ್ಲಿದೆ.ವಾರದ ಆರಂಭದಲ್ಲಿ ರೂಪಾಯಿ ಮೌಲ್ಯ 54 ಪೈಸೆಗಳಷ್ಟು ಕುಸಿದು ಡಾಲರ್ ಎದುರು 77.44 ರ ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪಿತ್ತು. ಕಳೆದ ವಾರಾಂತ್ಯಕ್ಕೆ ರೂಪಾಯಿ ಮೌಲ್ಯ 55 ಪೈಸೆಯಷ್ಟು ಕುಸಿದು 76.90ಕ್ಕೆ ತಲುಪಿತ್ತು.ಡಾಲರ್ ಮುಂದೆ ರೂಪಾಯಿ ಕುಸಿತದ ಅಪಾಯ ಹೆಚ್ಚುತಲೇ ಇದೆ. ಜಾಗತಿಕ ಕೇಂದ್ರ ಬ್ಯಾಂಕ್‌ ನಿರೀಕ್ಷೆಗೂ ಹೆಚ್ಚಿನ ದರ ಏರಿಕೆ ಮಾಡಲಿದೆ ಎಂಬ ಕಾರಣಕ್ಕೆ ಈ ಬೆಳವಣಿಗೆ ಕಂಡು ಬಂದಿದೆ.


ಡಾಲರ್ ಜಿಗಿತ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ


ವಾರದ ಆರಂಭದಲ್ಲಿ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ವಿರುದ್ಧ ಭಾರತದ ಅಧಿಕೃತ ಕರೆನ್ಸಿ ರೂಪಾಯಿ 51 ಪೈಸೆ ಕುಸಿದು ಸಾರ್ವಕಾಲಿಕ ಕನಿಷ್ಠ ರೂ 77.41 ಕ್ಕೆ ತಲುಪಿತ್ತು. ರೂಪಾಯಿ ಮೌಲ್ಯ ಅಮೆರಿಕನ್ ಡಾಲರ್‌ ಎದುರು 77.17 ರೂ.ನಲ್ಲಿ ವಹಿವಾಟು ಆರಂಭ ಮಾಡಿತು. ಬಳಿಕ 51 ಪೈಸೆಯ ಕುಸಿತ ದಾಖಲಿಸಿತು.ಮಾರ್ಚ್‌ನಲ್ಲಿ ರೂಪಾಯಿ 76.98ರಷ್ಟು ಕುಸಿತ ಕಂಡಿತ್ತು. ಅದಕ್ಕೂ ಅಧಿಕ ರೂಪಾಯಿ ಮೌಲ್ಯ ಸೋಮವಾರ ಇಳಿದಿದೆ.


ಬಲಶಾಲಿ ಡಾಲರ್

ಡಾಲರ್ ಬಲವಾಗುತ್ತಿದೆ ಎಂದು ಸಂಶೋಧನಾ ವಿಶ್ಲೇಷಕರು ಹೇಳಿದ್ದಾರೆ. ಈಕ್ವಿಟಿ ಮಾರುಕಟ್ಟೆಯಲ್ಲಿ ತೀವ್ರ ಮಾರಾಟ ಮತ್ತು ಹೆಚ್ಚಿದ ಕಚ್ಚಾ ಬೆಲೆಗಳು ಮತ್ತು ದೇಶೀಯ ಹಣದುಬ್ಬರವು ಭಾರತೀಯ ರೂಪಾಯಿ ಕುಸಿತದ ಹಿಂದಿನ ಕಾರಣಗಳಾಗಿವೆ ಎಂದು ಪಿಟಿಐ ವರದಿ ಮಾಡಿದೆ. ಭಾರತೀಯ ರೂಪಾಯಿ ಮೌಲ್ಯವು ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಬಲಶಾಲಿ ಡಾಲರ್ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎನ್ನಲಾಗಿದೆ.


ಶೇರು ಮಾರುಕಟ್ಟೆಯಲ್ಲಿ ಬಿರುಸಿನ ವಹಿವಾಟು

ಅಮೇರಿಕದಲ್ಲಿ ದರಗಳು ಉತ್ತಮವಾಗಿ ಮಾರ್ಪಟ್ಟ ಬೆನ್ನಲ್ಲೇ ಶೇರು ಮಾರುಕಟ್ಟೆಗಳಲ್ಲಿ ತೀವ್ರ ವಹಿವಾಟು ನಡೆದಿದೆ.


ದೇಶೀಯ ಹಣದುಬ್ಬರ

ಕಚ್ಚಾ ತೈಲ ಬೆಲೆಗಳ ಏರಿಕೆ ಮತ್ತು ದೇಶೀಯ ಹಣದುಬ್ಬರ ಹೆಚ್ಚಳ RBI ಮೇಲೆ ಹೊರೆ ಹೆಚ್ಚಿಸಿದೆ. ಈ ನಿಟ್ಟಿನಲ್ಲಿ RBI ರೆಪೋ ದರವನ್ನು ಹೆಚ್ಚಳ ಮಾಡಿದೆ. ಹಣದುಬ್ಬರ ಹೆಚ್ಚಾದಂತೆ ದೇಶೀಯ ಸೊತ್ತಿನಲ್ಲಿ ವಿದೇಶಿ ಹೂಡಿಕೆದಾರರಿಗೆ ಹೂಡಿಕೆಗೆ ಅವಕಾಶ ನೀಡಬೇಕಾದ ಸ್ಥಿತಿಗೆ ದೂಡಬಹುದು ಎಂದು ಕೂಡಾ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ. ಹಣದುಬ್ಬರವೂ ಕೂಡಾ ಡಾಲರ್ ಎದುರು ರೂಪಾಯಿ ಇಳಿಕೆಗೆ ಕಾರಣ ಎನ್ನಲಾಗಿದೆ.


ಡಾಲರ್ Vs ರೂಪಾಯಿ

ಕರೆನ್ಸಿ ಮಾರುಕಟ್ಟೆಯಲ್ಲಿ ಉತ್ತಮ ವಹಿವಾಟು ನಡೆಯಲಿದೆ ಎಂಬ ನಿರೀಕ್ಷೆ ಇದೆ. ರೂಪಾಯಿ 77.20 ಮತ್ತು 77.80 ರ ವ್ಯಾಪ್ತಿಯಲ್ಲಿ ಇರಬಹುದು ಎಂದು ನಿರೀಕ್ಷೆ ಇದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಆದರೆ, ಆರ್‌ಬಿಐ ನಿರ್ಧಾರ ಹೇಗೆ ಬರಲಿದೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100