ದಿಶಾ ಪಟಾನಿ 'ಹಾಟ್' ಫೋಟೊಗೆ 'ಹಾರ್ಟ್' ಸಿಂಬಲ್ ಮೂಲಕ ಪ್ರೀತಿ ವ್ಯಕ್ತಪಡಿಸಿದ ಅಭಿಮಾನಿಗಳು

ಮುಂಬೈ: ಟಾಲಿವುಡ್​ನ 'ಲೋಫರ್' ಸಿನಿಮಾದ ಮೂಲಕ ಮೊದಲ ಬಾರಿಗೆ ಬಣ್ಣದ ಜಗತ್ತಿಗೆ ಪದಾರ್ಪಣೆ ಮಾಡಿರುವ ನಟಿ ದಿಶಾ ಪಟಾನಿ ಸದ್ಯ ಬಾಲಿವುಡ್​ನ ಟಾಪ್​ ತಾರೆಯರಲ್ಲಿ ಓರ್ವರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ದಿಶಾ ಪಟಾನಿ, ಸದಾ ತಮ್ಮ ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ಮತ್ತೆರಡು ಹಾಟ್ ಫೋಟೋಗಳನ್ನು ಶೇರ್ ಮಾಡಿ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ.

ದೇಶಾದ್ಯಂತ ಕೋಟ್ಯಂತರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್​​​ ನ ಹಾಟ್​ ಬೆಡಗಿ ದಿಶಾ ಪಟಾನಿ ಇದೀಗ ಮತ್ತೆರಡು ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.‌ ಅವರು ಬಿಳಿ ಬಣ್ಣದ ಬಾಡಿ ಕಾನ್ ವಸ್ತ್ರದಲ್ಲಿ ಮಾದಕ ಪೋಸ್ ನೀಡಿದ್ದಾರೆ. ಇದರಲ್ಲಿ ಒಂದು ಫೋಟೋ ಬ್ಲರ್ ಆಗಿದೆ. ಅಭಿಮಾನಿಗಳು ದಿಶಾ ಹಾಟ್ ಫೋಟೋ ನೋಡಿ ಹಾರ್ಟ್ ಸಿಂಬಲ್ ಹಾಕಿ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಲ್ಲದೆ, ದಿಶಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದ್ದು, ಸಕತ್​ ವೈರಲ್​ ಆಗುತ್ತಿವೆ.


ಕುಂಗ್​ ಫು ಯೋಗ, ವೆಲ್​ಕಮ್​ ಟು ನ್ಯೂಯಾರ್ಕ್​, ಭಾಗಿ 2, ಮಲಾಗ್​, ಭರತ್​, ಭಾಗಿ 3 ಮತ್ತು ರಾಧೆ ಸಿನಿಮಾಗಳಲ್ಲಿ ನಟಿಸಿರುವ ದಿಶಾ, ಕಳೆದ ನವೆಂಬರ್ 27 ರಿಂದ 'ಯೋಧ' ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದರು. ದಿಶಾ ಜೊತೆಗೆ ನಟರಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಾಶಿ ಖನ್ನಾ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.