-->
2023ರವರೆಗೆ ಕೇತು ಗೋಚಾರ ಈ ರಾಶಿಯವರಿಗೆ ಶುಭಫಲಗಳನ್ನು ನೀಡಲಿದ್ದಾನೆ ರಾಹು...!!

2023ರವರೆಗೆ ಕೇತು ಗೋಚಾರ ಈ ರಾಶಿಯವರಿಗೆ ಶುಭಫಲಗಳನ್ನು ನೀಡಲಿದ್ದಾನೆ ರಾಹು...!!


ಮಕರ ರಾಶಿ- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೇತುವಿನ ಈ ಸ್ಥಾನಪಲ್ಲಟ ಮಕರ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಈ ಅವಧಿಯಲ್ಲಿ ಈ ರಾಶಿಯವರಿಗೆ ಹೊಸ ಉದ್ಯೋಗ ಸಿಗುವ ಸಾಧ್ಯತೆಯಿದೆ. ಇದೇ ವೇಳೆ ಕೆಲಸ ಮಾಡುವ ಜನರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ವ್ಯಾಪಾರದಲ್ಲಿ ಲಾಭದ ಸಾಧ್ಯತೆ ಇದೆ. ನಿಂತು ಹೋದ ಹಣ ನಿಮ್ಮ ಬಳಿ ಹಿಂದಿರುಗಲಿದೆ. ಈ ಸಮಯದಲ್ಲಿ, ಆಸ್ತಿ ಅಥವಾ ವಾಹನವನ್ನು ಖರೀದಿಸುವ ಅವಕಾಶಗಳನ್ನು ಸಿಗಲಿವೆ. ಈ ಅವಧಿಯಲ್ಲಿ ವೈಡೂರ್ಯದ ಕಲ್ಲು ಧರಿಸುವುದು ಮಂಗಳಕರ ಫಲಗಳನ್ನು ನೀಡಲಿದೆ.


ಕರ್ಕ ರಾಶಿ- ಈ ರಾಶಿಯ ನಾಲ್ಕನೇ ಮನೆಯಲ್ಲಿ ಕೇತುವಿನ ಪ್ರವೇಶ ನಡೆದಿದೆ. ಜಾತಕದ ನಾಲ್ಕನೇ ಮನೆಯನ್ನು ಸಂತೋಷ, ತಾಯಿ ಮತ್ತು ವಾಹನ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯು ಈ ರಾಶಿಯ ಜನರಿಗೆ ವಿಶೇಷವಾಗಿ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನೀವು ಹೊಸ ಉದ್ಯೋಗದ ಪ್ರಸ್ತಾಪವನ್ನು ಪಡೆಯಬಹುದು. ಅಥವಾ ಪ್ರಮೋಶನ್ ಕೂಡ ಪಡೆಯಬಹುದು. ಅವಿವಾಹಿತರಿಗೆ ವಿವಾಹ ಸಂಬಂಧ ಕೂಡಿ ಬರುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಸ್ಥಾನ ಪರಿವರ್ತನೆಯ ಸಾಧ್ಯತೆಗಳೂ ಗೋಚರಿಸುತ್ತವೆ. ಈ ಸಮಯದಲ್ಲಿ ಮೂನ್ ಸ್ಟೋನ್ ಧರಿಸುವುದು ನಿಮಗೆ ಪ್ರಯೋಜನಕಾರಿಯಾಗಿದೆ.ಕುಂಭ ರಾಶಿ- ಈ ರಾಶಿಯ ಒಂಬತ್ತನೇ ಮನೆಗೆ ಕೇತು ಪ್ರವೇಶಿಸಿದ್ದಾನೆ. ಇದು ಅದೃಷ್ಟ ಮತ್ತು ವಿದೇಶ ಪ್ರವಾಸದ ಸ್ಥಾನ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಅದೃಷ್ಟವು ನಿಮ್ಮನ್ನು ಬೆಂಬಲಿಸಲಿದೆ. ಈ ಸಮಯದಲ್ಲಿ, ವ್ಯಾಪಾರ ಪ್ರಯಾಣದ ಯೋಗ ನಿರ್ಮಾಣಗೊಳ್ಳುತ್ತಿದ್ದು, ಅದು ಪ್ರಯೋಜನಕಾರಿ ಸಾಬೀತಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯಬಹುದು. ಈ ಅವಧಿಯಲ್ಲಿ ನಿಂತು ಹೋದ ನಿಮ್ಮ ಬಡ್ತಿ ನಿಮಗೆ ಸಿಗುವ ಸಾಧ್ಯತೆ ಇದೆ. ಹಣಕಾಸಿನ ಪರಿಸ್ಥಿತಿಯು ಬದಲಾಗಲಿದೆ. .

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article