-->

ಮಂಗಳೂರು: ರಸ್ತೆ ಬದಿಯಲ್ಲಿ ಕಸ ಎಸೆಯುತ್ತಿದ್ದ ಫಾಸ್ಟ್ ಫುಡ್ ಹೊಟೇಲ್ ನೌಕರನಿಗೆ 20 ಸಾವಿರ ರೂ. ದಂಡ

ಮಂಗಳೂರು: ರಸ್ತೆ ಬದಿಯಲ್ಲಿ ಕಸ ಎಸೆಯುತ್ತಿದ್ದ ಫಾಸ್ಟ್ ಫುಡ್ ಹೊಟೇಲ್ ನೌಕರನಿಗೆ 20 ಸಾವಿರ ರೂ. ದಂಡ

ಮಂಗಳೂರು: ನಗರದ ಕಂಕನಾಡಿ ಮಾರುಕಟ್ಟೆ ಬಳಿಯ ರಸ್ತೆ ಬದಿಯಲ್ಲಿ ಕಸ ಎಸೆಯುತ್ತಿದ್ದ ಫಾಸ್ಟ್ ಫುಡ್ ಹೊಟೇಲ್ ನೌಕರನೋರ್ವನಿಗೆ ಮಂಗಳೂರು ಮನಪಾ 20 ಸಾವಿರ ರೂ. ದಂಡ ವಿಧಿಸಿದೆ.

ಕಂಕನಾಡಿಯ ಈ ಪ್ರದೇಶವು ತ್ಯಾಜ್ಯ ಎಸೆದು ಬ್ಲ್ಯಾಕ್‌ ಸ್ಪಾಟ್ ಎಂದೆನಿಸಿತ್ತು. ಆದ್ದರಿಂದ ಈ ಪ್ರದೇಶವನ್ನಿ ಮಹಾನಗರ ಪಾಲಿಕೆ ಸುಂದರೀಕರಣಗೊಳಿಸಿತ್ತು. ಆ ಬಳಿಕ ತ್ಯಾಜ್ಯ ಎಸೆಯುವುದು ನಿಯಂತ್ರಣಕ್ಕೆ ಬಂದಿತ್ತು.


ಆದರೆ ಕೆಲ ದಿನಗಳಿಂದ ಇಲ್ಲಿ ಮತ್ತೆ ಕಸ ಎಸೆಯಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು ದಾಳಿ ನಡೆಸಿ ತ್ಯಾಜ್ಯ ಸುರಿಯುತ್ತಿದ್ದ ಫಾಸ್ಟ್ ಫುಡ್ ಹೊಟೇಲ್ ನೌಕರನಿಗೆ 20 ಸಾವಿರ ರೂ. ದಂಡ ವಿಧಿಸಿದ್ದಾರೆ.

Ads on article

Advertise in articles 1

advertising articles 2

Advertise under the article