ಬಿಕಿನಿಯಲ್ಲಿ ಹುಟ್ಟುಹಬ್ಬದ ಕೇಕ್ ಕತ್ತರಿಸಿದ ಅಮಿರ್ ಖಾನ್ ಪುತ್ರಿ

ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಪುತ್ರಿ ಇರಾ ಖಾನ್‌ ತಮ್ಮ 25ನೇ ವರ್ಷದ ಹುಟ್ಟುಹಬ್ಬವನ್ನು ರವಿವಾರ ಆಚರಿಸಿದ್ದಾರೆ. ಇರಾ ಖಾನ್ ಬಿಕಿನಿ ಧರಿಸಿಯೇ ತಮ್ಮ ಬರ್ತ್ ಡೇ ಕೇಕ್ ಅನ್ನು ಕಟ್ ಮಾಡಿ ಸಂಭ್ರಮಿಸಿದ್ದಾರೆ‌. ಈ ಸಂದರ್ಭ ಆಮೀರ್ ಖಾನ್, ಇರಾ ಸಹೋದರ ಆಜಾದ್‌ ಹಾಗು ತಾಯಿ ಟೀನಾ ದತ್ತಾ ಇದ್ದರು. ಇರಾ ಖಾನ್ ಬಿಕಿನಿಯಲ್ಲೇ ಕೇಕ್‌ ಕಟ್‌ ಮಾಡುತ್ತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ಪಡ್ಡೆ ಹುಡುಗರ ಎದೆಬಡಿತ ಹೆಚ್ಚಿಸುವಂತಿದೆ.


ಆಗಷ್ಟೇ ಸ್ವಿಮ್ಮಿಂಗ್‌ ಪೂಲ್‌ನಿಂದ ಹೊರಬಂದಿರುವ ಇರಾ ಖಾನ್‌ ಆಕರ್ಷಕವಾಗಿ ಕಾಣುತ್ತಿದ್ದಾರೆ. ಕ್ಯಾಂಡಲ್ ಅನ್ನು ಆರಿಸಿ ಕೇಕ್‌ ಕಟ್‌ ಮಾಡುತ್ತಿದ್ದಾರೆ. ಸುತ್ತಮುತ್ತ ಕುಟುಂಬ ಸದಸ್ಯರಿದ್ದಾರೆ. ಬಣ್ಣದ ಹೂವಿನ ಚಿತ್ರವಿರುವ ಆಕರ್ಷಕ ಬಿಕಿನಿ, ಸುಂದರ ಕಿವಿಯೋಲೆ ಧರಿಸಿರುವ ಇರಾ ಸ್ಟೈಲಿಶ್‌ ಆಗಿ ಕಂಗೊಳಿಸಿದ್ದಾರೆ. ಆಮೀರ್ ಮತ್ತು ಪುತ್ರ ಅಜಾದ್‌ ಕೂಡಾ ಆಗಷ್ಟೇ ಸ್ವಿಮ್ಮಿಂಗ್ ಪೂಲ್‌ನಿಂದ ಹೊರಬಂದಿರುವುದು ಗೊತ್ತಾಗುತ್ತದೆ. ಕಪ್ಪು ಮತ್ತು ಬಿಳಿ ಔಟ್‌ಫಿಟ್‌ನಲ್ಲಿ ಟೀನಾ ಕಾಣುತ್ತಾರೆ. ಈ ಫೋಟೋಗಳನ್ನು ಸ್ವತಃ ಇರಾ ಖಾನ್ ಅವರೇ ತಮ್ಮ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.


ಇರಾ ಖಾನ್ ಬಾಯ್‌ಫ್ರೆಂಡ್‌ ನೂಪುರ್‌ ಶಿಖರೆ ಕೂಡಾ ಇರಾ ಖಾನ್‌ ಹುಟ್ಟುಹಬ್ಬದ ಫೋಟೋ ಶೇರ್ ಮಾಡಿದ್ದು, 'ಹ್ಯಾಪಿ ಬರ್ತ್‌ಡೇ ಮೈ ಲವ್' ಎಂದು ಬರೆದಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu