-->

ಅಮೇರಿಕಾದ ಯೂಟ್ಯೂಬರ್ ಧರಿಸಿರುವ ವಜ್ರದ ನೆಕ್ಲೆಸ್ ಭಾರತದ ಯಾವ ರಾಜನದ್ದೆಂದು ಗೊತ್ತೇ?

ಅಮೇರಿಕಾದ ಯೂಟ್ಯೂಬರ್ ಧರಿಸಿರುವ ವಜ್ರದ ನೆಕ್ಲೆಸ್ ಭಾರತದ ಯಾವ ರಾಜನದ್ದೆಂದು ಗೊತ್ತೇ?

ಮಂಗಳೂರು: ಅಮೇರಿಕಾದ ಪ್ರಖ್ಯಾತ ಯೂಟ್ಯೂಬರ್ ಎಮ್ಮಾ ಚೇಂಬರ್ಲಿನ್ ಧರಿಸಿರುವ ವಜ್ರಖಚಿತ ನೆಕ್ಲೆಸ್ ಈಗ ಭಾರೀ ಸುದ್ದಿಯಲ್ಲಿದೆ. ಈಕೆ ಭಾರತದಿಂದ ಕಳವುಗೈದಿರುವ ನೆಕ್ಲೆಸ್ ಅನ್ನು ಧರಿಸಿದ್ದು, ಇದು ಪಂಜಾಬ್ ನ ಪಟಿಯಾಲಾದ ರಾಜಾ ಭೂಪಿಂದರ್ ಸಿಂಗ್ ಗೆ ಸೇರಿದ್ದು ಎಂದು ಹೇಳಲಾಗುತ್ತಿದೆ.

ಅಮೇರಿಕಾದ ಪ್ರಸಿದ್ಧ ಮೆಟ್ ಗಾಲಾದಲ್ಲಿ ಭಾಗವಹಿಸಲು ಯೂಟ್ಯೂಬರ್ ಎಮ್ಮಾ ಚೇಂಬರ್ಲಿನ್ ಈ ವಜ್ರಖಚಿತ ನೆಕ್ಲೆಸ್ ಅನ್ನು ಧರಿಸಿಕೊಂಡು ಬಂದಿದ್ದರು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಭಾರತೀಯರು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಸುತ್ತಿದ್ದಾರೆ. ಕೆಲವರು ಎಮ್ಮಾಗೆ ಛೀಮಾರಿ ಹಾಕುತ್ತಿದ್ದಾರೆ. ಇನ್ನು ಕೆಲವರು ಹಿಡಿಶಾಪ ಹಾಕುತ್ತಿದ್ದಾರೆ.



ಅತ್ಯಂತ ದುಬಾರಿ ವೆಚ್ಚದಲ್ಲಿ ಈ ವಜ್ರ ಖಚಿತ ನೆಕ್ಲೆಸ್ ಅನ್ನು ತಯಾರಿಸಲಾಗಿದ್ದು, ಇಂದಿನ ಲೆಕ್ಕದಲ್ಲಿ ಈ ನೆಕ್ಲೆಸ್ ಗೆ 30 ಮಿಲಿಯನ್ ಡಾಲರ್ ಆಗುತ್ತದೆ ಎನ್ನಲಾಗಿದೆ. ರಾಜಾ ಭೂಪಿಂದರ್ ಸಿಂಗ್ ಪುತ್ರ ಪಟಿಯಾಲದ ಮಹಾರಾಜ ಯಾದವೀಂದ್ರ ಸಿಂಗ್ ಕೊನೆಯದಾಗಿ 1948 ರಲ್ಲಿ ಧರಿಸಿದ್ದರು. ಆ ಬಳಿಕ ಈ ನೆಕ್ಲೆಸ್ ನಿಗೂಢವಾಗಿ ಕಣ್ಮರೆಯಾಗಿದೆ ಎಂದು ಹೇಳಲಾಗುತ್ತಿದೆ. ಇದೀಗ ಮೆಟ್ ಗಾಲಾಕ್ಕೆ ಈ ನೆಕ್ಲೆಸ್ ಅನ್ನು ಧರಿಸಿ ಬಂದ ಯೂಟ್ಯೂಬರ್ ಎಮ್ಮಾ ಎಲ್ಲರ ಗಮನ ಸೆಳೆದಿದ್ದಾರೆ.

2,930 ವಜ್ರಗಳು ಹಾಗೂ ಹಲವು ಬರ್ಮೀಸ್ ಮಾಣಿಕ್ಯಗಳಿಂದ ಅಲಂಕಾರಗೊಂಡಿರುವ, ಐದು ಸಾಲುಗಳ ಪ್ಲಾಟಿನಂ ಚೈನ್ ಗಳನ್ನು ಹೊಂದಿದ್ದ ಈ ನೆಕ್ಲೆಸ್ ಅನ್ನು 1928 ರಲ್ಲಿ ತಯಾರಿಸಲಾಗಿತ್ತಂತೆ. ಅತ್ಯಂತ ದುಬಾರಿ ಬೆಲೆಯ ಡಿ-ಬೀರ್ಸ್ ವಜ್ರಗಳನ್ನಿಟ್ಟುಂಡು ಪ್ರಖ್ಯಾತ ಆಭರಣ ವಿನ್ಯಾಸಕಾರರಿಂದ ರಾಜಾ ಭೂಪಿಂದರ್ ಸಿಂಗ್ ಈ ನೆಕ್ಲೆಸ್ ಅನ್ನು ಮಾಡಿಸಿದ್ದರಂತೆ. ಇತ್ತೀಚೆಗೆ ಕಾರ್ಟಿಯರ್ ಜ್ಯುವೆಲ್ಲರ್ಸ್ ಸಂಸ್ಥೆಯು ಹರಾಜು ಪ್ರಕ್ರಿಯೆಯಲ್ಲಿ ಈ ವಜ್ರದ ನೆಕ್ಲೆಸ್ ಅನ್ನು ಖರೀದಿಸಿತ್ತು ಎಂದು ಹೇಳಲಾಗುತ್ತಿದೆ. ಕಾರ್ಟಿಯರ್ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಎಮ್ಮಾ ಇದೀಗ ಈ ವಜ್ರದ ನೆಕ್ಲೆಸ್ ಧರಿಸಿರೋದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.

Ads on article

Advertise in articles 1

advertising articles 2

Advertise under the article