-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಗುಪ್ತಾಂಗಕ್ಕೆ ಮದ್ಯದ ಬಾಟಲಿ ತೂರಿ ಮೃಗೀಯ ವರ್ತನೆ: ಸೆಲೆಬ್ರಿಟಿ ನಟನ ಮೇಲೆ ಆರೋಪ

ಗುಪ್ತಾಂಗಕ್ಕೆ ಮದ್ಯದ ಬಾಟಲಿ ತೂರಿ ಮೃಗೀಯ ವರ್ತನೆ: ಸೆಲೆಬ್ರಿಟಿ ನಟನ ಮೇಲೆ ಆರೋಪ

ನವದೆಹಲಿ: ಸೆಲೆಬ್ರಿಟಿಗಳ ವಿವಾಹಗಳು ಎಷ್ಟು ಪ್ರಖ್ಯಾತವೋ,  ಸೆಲಿಬ್ರಿಟಿಗಳ ವಿಚ್ಛೇದನಗಳೂ ಅಷ್ಟೇ ಕುಖ್ಯಾತಿಯನ್ನು ಪಡೆದಿರುತ್ತದೆ. ಹಾಲಿವುಡ್ ನ ಖ್ಯಾತ ನಟ ಜಾನಿ ಡೆಪ್​ 'ಬ್ಲಾಕ್​ಬಸ್ಟರ್​ ಪೈರಟ್ಸ್​ ಆಫ್​ ದಿ ಕೆರೆಬ್ಬಿಯನ್​' ಸಿನಿಮಾದಲ್ಲಿ ನಟಿಸಿ ಜನಮನ ಸೂರೆಗೊಂಡವರು. ಜಾನಿ ಡೆಪ್​ ಅವರಿಗೆ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅವರನ್ನು ಹೃದಯದಲ್ಲಿ ತುಂಬಿ ಆರಾಧಿಸುತ್ತಾರೆ. ಆದರೆ, ಇದೀಗ ಜಾನಿ ಡೆಪ್ ವಿರುದ್ಧ ಕೇಳಿಬಂದಿರುವ ಆರೋಪ ಅಭಿಮಾನಿಗಳಿಗೆ ಆಘಾತ ತಂದಿದೆ.

ಜಾನಿ ಡೆಪ್​ 2015ರಲ್ಲಿ ಹಾಲಿವುಡ್​ ನಟಿ ಆ್ಯಂಬರ್​ ಹರ್ಡ್​ ಎಂಬುವರನ್ನು ವಿವಾಹವಾಗಿದ್ದರು. ಆದರೆ, ಕೇವಲ 2 ವರ್ಷದಲ್ಲಿಯೇ ಈ ದಂಪತಿ ತಮ್ಮ ದಾಂಪತ್ಯ ಜೀವನಕ್ಕೆ ಇತಿಶ್ರೀ ಹಾಡಿದರು. ಇದಾದ ಬಳಿಕ ತಾವು ಕೌಟುಂಬಿಕ ಕಲಹದಿಂದ ಬಳಲಿದ್ದು, ಪರಿಹಾರ ರೂಪದಲ್ಲಿ 350 ಕೋಟಿ ರೂ.  ನೀಡಬೇಕೆಂದು ಜಾನಿ ಡೆಪ್​ ವಿರುದ್ಧ ಆ್ಯಂಬರ್​ ಹರ್ಡ್​ ಕೋರ್ಟ್​ನಲ್ಲಿ ದಾವೆ ಹೂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಜಾನಿ ಡೆಪ್​ ಕೂಡ ಆಕೆಯ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. 

ಇನ್ನು ಆ್ಯಂಬರ್ ಹರ್ಡ್​ ತನ್ನ ಮಾಜಿ ಪತಿಯ ವಿರುದ್ಧ ಗಂಭೀರವಾದ ಆರೋಪವನ್ನು ಮಾಡಿದ್ದಾರೆ. ಜಾನಿ ಡೆಪ್ ತನ್ನ ಬೆರಳನ್ನು ಕತ್ತರಿಸಿದ್ದಲ್ಲದೆ, ಮೃಗೀಯವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಿಸಿಕೊಂಡಿದ್ದಾರೆ ಎಂದು ಆಪಾದಿಸಿದ್ದಾರೆ. ಆ್ಯಂಬರ್​ ಪರ ವಕಾಲತ್ತು ವಹಿಸಿರುವ ವಕೀಲ ಎಲೈನ್​ ಬ್ರೆಡೆಹೊಫ್ಟ್​ ಹೇಳಿಕೆ ಪ್ರಕಾರ ಹರ್ಡ್​ ಅವರ ಮೇಲೆ ಕೆಲ ಹೀನ ಕೃತ್ಯಗಳನ್ನು ಜಾನಿ ಡೆಪ್​ ಎಸಗಿದ್ದಾರೆ. ನೈಟ್​ಗೌನ್​ ಹರಿದು ವಿಚಿತ್ರವಾಗಿ ವರ್ತಿಸಿದ್ದಾನೆ. ಅಲ್ಲದೆ, ಆಕೆಯ ಗುಪ್ತಾಂಗಕ್ಕೆ ಮದ್ಯದ ಬಾಟಲ್​ ತೂರಿಸಿ ಮೃಗೀಯವಾಗಿ ನಡೆದುಕೊಂಡಿದ್ದಾನೆ ಎಂದು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ.  

58 ವರ್ಷದ ಜಾನಿ ಡೆಪ್ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ. ಡೆಪ್​​ ಪರ ವಕೀಲರಾದ ಕ್ಯಾಮಿಲ್ಲೆ ವಾಸ್ಕ್ವೆಜ್ ಹೇಳಿಕೆ ಪ್ರಕಾರ ಹರ್ಡ್​ ತನ್ನ ಸಾರ್ವಜನಿಕ ಚಿತ್ರದ ಬಗ್ಗೆ ಗೀಳನ್ನು ಹೊಂದಿದ್ದಾಳೆ. ಅವಳು ಸಂತ್ರಸ್ತೆ ಎಂಬ ಪಾತ್ರದಲ್ಲೇ ಹಲವು ವರ್ಷಗಳಿಂದ ಬದುಕುತ್ತಿದ್ದಾರೆ. ಸಂತ್ರಸ್ತೆಯಾಗಿ ತಮ್ಮ ಅಭಿನಯವನ್ನು ನೀಡಲು ತಯಾರಿ ನಡೆಸುತ್ತಿದ್ದಾರೆ ಎನ್ನುವ ಮೂಲಕ ಹರ್ಡ್​ ಆರೋಪ ಸುಳ್ಳು ಎಂದು ವ್ಯಂಗ್ಯವಾಡಿದ್ದಾರೆ. 

Ads on article

Advertise in articles 1

advertising articles 2

Advertise under the article

ಸುರ