-->
ಮಂಗಳೂರು: ಬಟ್ಟೆ ಮಳಿಗೆಗೆ ಬಂದ ಬುರ್ಖಾಧಾರಿ ಕಳ್ಳಿಯರ ಕರಾಮತ್ತು ಸಿಸಿ ಕ್ಯಾಮರಾದಲ್ಲಿ ಸೆರೆ

ಮಂಗಳೂರು: ಬಟ್ಟೆ ಮಳಿಗೆಗೆ ಬಂದ ಬುರ್ಖಾಧಾರಿ ಕಳ್ಳಿಯರ ಕರಾಮತ್ತು ಸಿಸಿ ಕ್ಯಾಮರಾದಲ್ಲಿ ಸೆರೆ

ಮಂಗಳೂರು: ಬಟ್ಟೆಶಾಪ್ ಗೆ ಬಂದ ಇಬ್ಬರು ಬುರ್ಖಾಧಾರಿ ಮಹಿಳೆಯರು 7-8 ನೈಟಿಗಳನ್ನು ಬುರ್ಖಾದೊಳಗಿಟ್ಟು ಎಗರಿಸಿರುವ ಘಟನೆ ಮಂಗಳೂರು ಹೊರ ವಲಯದ ತೊಕ್ಕೊಟ್ಟಿನಲ್ಲಿ ನಡೆದಿದೆ.

ನಗರದ ತೊಕ್ಕೊಟ್ಟಿನ ಒಳಪೇಟೆಯ ಚರ್ಚ್ ರಸ್ತೆಯಲ್ಲಿರುವ ವೆಲಂಕಣಿ ಲೇಡೀಸ್ ಸೆಲೆಕ್ಷನ್ಸ್ ಕಮ್ ಸ್ಟುಡಿಯೋದಲ್ಲಿ ಕಳ್ಳಿಯರು ತಮ್ಮ ಕರಾಮತ್ತು ನಡೆದಿದೆ. ಮಾ.7ರಂದು ಮಧ್ಯಾಹ್ನ ಈ ಘಟನೆ ನಡೆದಿದುದಾಗಿ ತಿಳಿದು ಬಂದಿದೆ. ಮಳಿಗೆಯಲ್ಲಿ ಮಹಿಳಾ ಸಿಬ್ಬಂದಿ ಮಾತ್ರ ಇದ್ದಿದ್ದು, ಈ ವೇಳೆ ಗ್ರಾಹಕರ ಸೋಗಿನಲ್ಲಿ ಇಬ್ಬರು ಬುರ್ಖಾಧಾರಿ ಮಹಿಳೆಯರು ಬಟ್ಟೆ ಖರೀದಿಸುವ ನೆಪದಲ್ಲಿ ಕೈಚಳಕ ತೋರಿದ್ದಾರೆ. ಬಟ್ಟೆ ಅಂಗಡಿಯ ಸಿಬ್ಬಂದಿ ಕೆಳಗಡೆ ಬಾಗಿ ಹುಡುಕಾಟ ನಡೆಸುತ್ತಿದ್ದಾಗ ಕಪಾಟಿನಿಂದ ಏಳೆಂಟು ನೈಟಿಗಳನ್ನು ಬುರ್ಖಾದೊಳಗೆ ತುರುಕಿಕೊಂಡು ಕಾಲ್ಕಿತ್ತಿದ್ದಾರೆ.

ಮಳಿಗೆ ಮಾಲಕರು ಅನುಮಾನಗೊಂಡು ರಾತ್ರಿ ಸಿಸಿ ಕ್ಯಾಮೆರಾವನ್ನು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಳ್ಳಿಯರಿಬ್ಬರು ಕಳವು ಕೃತ್ಯ ನಡೆಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ‌. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Ads on article

Advertise in articles 1

advertising articles 2

Advertise under the article