Sahyadri College bags 3 Rank- ವಿಟಿಯು ವಾರ್ಷಿಕ ಪರೀಕ್ಷೆ: ಸಹ್ಯಾದ್ರಿ ಎಂಜಿನಿಯರಿಂಗ್‌ ಕಾಲೇಜಿನ ಸಾಧನೆ

ವಿಟಿಯು ವಾರ್ಷಿಕ ಪರೀಕ್ಷೆ: ಸಹ್ಯಾದ್ರಿ ಎಂಜಿನಿಯರಿಂಗ್‌ ಕಾಲೇಜಿನ ಸಾಧನೆ





ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜು ವಿಟಿಯು ವಾರ್ಷಿಕ ಪರೀಕ್ಷೆಗಳಲ್ಲಿ 3 ರಾಂಕ್‌ಗಳನ್ನು ಗಳಿಸಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಶ್ರೇಷ್ಠತೆ ಪ್ರದರ್ಶಿಸಿದೆ.



ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಅದರ ಆಡಳಿತ ಹಾಗೂ ಇಲ್ಲಿನ ವಿದ್ಯಾರ್ಥಿಗಳು, ಮತ್ತೊಮ್ಮೆ ಶೈಕ್ಷಣಿಕ ಸಾಧನೆಯನ್ನು ಮಾಡಿದ್ದಾರೆ ಮತ್ತು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ನಡೆಸಿದ 2020-21 ರ ವಾರ್ಷಿಕ ವಿಶ್ವವಿದ್ಯಾಲಯ ಪರೀಕ್ಷೆಗಳಲ್ಲಿ ಮೂರು Rank ಗಳಿಸಿ ಸಾಧನೆಯನ್ನು ಮಾಡಿದೆ.



ಸಹ್ಯಾದ್ರಿಯ ವಿದ್ಯಾರ್ಥಿನಿ ಜೆನ್ನಿಫರ್ ಕುಟಿನ್ಹೋ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ 9.54 CGPAಯೊಂದಿಗೆ 2ನೇ Rank ಗಳಿಸಿದ್ದಾರೆ.



ಅದೇ ರೀತಿ, ಅಭಿಷೇಕ್ ಬಿ.ಎಸ್. 9.44 CGPAಯೊಂದಿಗೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ 4ನೇ Rank ಪಡೆದಿದ್ದಾರೆ.


ಸಹ್ಯಾದ್ರಿಯ ಇನ್ನೊಬ್ಬ ವಿದ್ಯಾರ್ಥಿನಿ ಸ್ವಾತಿ ಕೆ. 9.25 CGPAಯೊಂದಿಗೆ ಇನ್ಫಾರ್ಮಶನ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ 6ನೇ Rank ಪಡೆದಿದ್ದಾರೆ.


ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಂಜುನಾಥ್ ಭಂಡಾರಿ, ಪ್ರಿನ್ಸಿಪಾಲ್ ಡಾ. ರಾಜೇಶ್ ಎಸ್, ಬೋಧಕ ಮತ್ತು ಸಿಬ್ಬಂದಿ ಸದಸ್ಯರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಅಡಿಯಲ್ಲಿ 200 ಕ್ಕೂ ಹೆಚ್ಚು ಸಂಯೋಜಿತ ಸಂಸ್ಥೆಗಳಲ್ಲಿ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ & ಮ್ಯಾನೇಜ್ ಮೆಂಟ್ ಗೆ ಹೆಮ್ಮೆ ತಂದ Rank ವಿಜೇತರ ಸಾಧನೆಗಾಗಿ ಅಭಿನಂದಿಸಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu