
ಪ್ರಿಯಕರನನ್ನು ಮರಕ್ಕೆ ಕಟ್ಟಿಹಾಕಿ ಆತನ ಕಣ್ಣೆದುರೇ ಪ್ರೇಯಸಿಯನ್ನು ಅತ್ಯಾಚಾರಗೈದ ಕುಡುಕರ ಗ್ಯಾಂಗ್
Friday, March 11, 2022
ಆಂಧ್ರಪ್ರದೇಶ: ಪ್ರಿಯಕರನನ್ನು ಮರಕ್ಕೆ ಕಟ್ಟಿಹಾಕಿ ಆತನ ಕಣ್ಣೆದುರೇ ಪ್ರೇಯಸಿಯನ್ನು ಕುಡುಕರ ಗ್ಯಾಂಗ್ವೊಂದು ಅತ್ಯಾಚಾರ ಮಾಡಿರುವ ಘಟನೆ ಇಲ್ಲಿನ ಪಲ್ಲಿಪಾಲೆಂ ಬೀಚ್ನಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಯುವಕನೊಬ್ಬನು ತನ್ನ ಪ್ರೇಯಸಿಯನ್ನು ಬೀಚ್ಗೆ ಕರೆದೊಯ್ದಿದ್ದಾನೆ. ಇದನ್ನು ಗಮನಿಸಿದ ಕುಡುಕರ ಗ್ಯಾಂಗ್ಒಂದು ಮೋಜು - ಮಸ್ತಿಯಲ್ಲಿ ತೊಡಗಿದ್ದ ಜೋಡಿ ಮೇಲೆ ದಾಳಿ ನಡೆಸಿದೆ. ಬಳಿಕ ಯುವಕನನ್ನು ಮರಕ್ಕೆ ಕಟ್ಟಿ ಹಾಕಿದೆ. ಬಳಿಕ ಆತನ ಕಣ್ಣೆದುರೇ ಪ್ರೇಯಸಿಯ ಮೇಲೆ ಅತ್ಯಾಚಾರ ನಡೆಸಿ ಅಮಾನವೀಯವಾಗಿ ವರ್ತಿಸಿದ್ದಾರೆ.
ಇದಾದ ಬಳಿಕ ಇಬ್ಬರೂ ತಮ್ಮ ನಿವಾಸಕ್ಕೆ ತೆರಳಿದ್ದಾರೆ. ಆದರೆ ಯುವತಿ ಸ್ಥಿತಿಯ ಗಮನಿಸಿದ ಆಕೆಯ ಸಹೋದರ ವಿಚಾರಿಸಿದಾಗ ನಡೆದ ವಿಚಾರವೆಲ್ಲವನ್ನು ಹೇಳಿದ್ದಾಳೆ. ತಕ್ಷಣ ಸಂತ್ರಸ್ತೆ ಸಹೋದರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಮುಕನನ್ನೊಬ್ಬನನ್ನು ಪತ್ತೆ ಹಚ್ಚಿದ್ದಾರೆ. ಮತ್ತೊಬ್ಬ ಆರೋಪಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.