
ಪಿಕ್ ಪಾಕೆಟ್ ಮಾಡಿ ಸಿಕ್ಕಿಬಿದ್ದ 'ಮೀ ಟೂ' ವಿಚಾರದಲ್ಲಿ ಸುದ್ದಿಯಾದ ನಟಿ!
Monday, March 14, 2022
ಕಲ್ಕತಾ: 2018ರಲ್ಲಿ ಲೈಂಗಿಕ ದೌರ್ಜನ್ಯದ ವಿರುದ್ಧ ‘ಮೀ ಟೂ’ ಚಳವಳಿ ಭಾರೀ ಸದ್ದು ಮಾಡಿತ್ತು. ನಟಿಯೊಬ್ಬರು ತಮ್ಮ ಮೇಲಾಗಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ದನಿ ಎತ್ತಿದ ಸಂದರ್ಭದಲ್ಲಿ ತಮಗೂ ಅದೇ ರೀತಿ ಆಗಿತ್ತು ಎಂಬುದಾಗಿ ಬಹುತೇಕ ಕ್ಷೇತ್ರಗಳ ಮಹಿಳೆಯರು ‘ಮೀ ಟೂ’ ಅಭಿಯಾನ ಆರಂಭಿಸಿದ್ದರು. ಈ ವೇಳೆ ಸುದ್ದಿಯಲ್ಲಿದ್ದ ಹಲವು ಮಹಿಳೆಯರ ಪೈಕಿ ಬೆಂಗಾಲಿ ಸಿನಿಮಾ ರಂಗದ ಖ್ಯಾತ ನಟಿ ರೂಪಾ ದತ್ತಾ ಕೂಡಾ ಓರ್ವರು. ಅವರು ನಟ, ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಬಳಿಕ ಅದು ಸುಳ್ಳು ಎಂದು ಆಗಿತ್ತು.
ಇದೀಗ ರೂಪಾ ದತ್ತ ಮಾಡಿರುವ ಕೃತ್ಯದಿಂದ ಪೊಲೀಸರೇ ಸುಸ್ತು ಬೀಳುವ ಘಟನೆ ನಡೆದಿದೆ. ಅದೇನೆಂದರೆ, ನಟಿ ರೂಪಾ ದತ್ತ ಪಿಕ್‌ಪಾಕೆಟ್ ಮಾಡಿ ಸಿಕ್ಕಿಬಿದ್ದಿದ್ದಾಳೆ. ಕಲ್ಕತ್ತಾದ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಪಿಕ್ ಪಾಕೆಟ್ ಮಾಡಲು ಹೋಗಿ ರೂಪಾ ದತ್ತ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇದೀಗ ಆಕೆಯನ್ನು ಬಂಧಿಸಲಾಗಿದೆ.
ಈ ಸಮ್ಮೇಳನದಲ್ಲಿ ಮಹಿಳೆಯೊಬ್ಬರು ಚೀಲವೊಂದನ್ನು ಡಸ್ಟ್‌ಬಿನ್‌ಗೆ ಎಸೆದಿರುವುದನ್ನು ಪೊಲೀಸರು ನೋಡಿದ್ದಾರೆ. ಇದರಿಂದ ಅನುಮಾನ ಹುಟ್ಟಿ ಅವರು ಆಕೆಯಯ ವಿಚಾರಿಸಿದ್ದಾರೆ. ಆಗ ಅವರಿಗೆ ಆ ಚೀಲದಲ್ಲಿ ದುಡ್ಡು ಇರುವುದು ಹಾಗೂ ಈಕೆ ಪ್ರಸಿದ್ಧ ನಟಿ ಎನ್ನುವುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಾದ ಬಳಿಕ ರೂಪಾ ದತ್ತಾರ ಬ್ಯಾಗ್ ತಪಾಸಣೆ ಮಾಡಲಾಗಿದೆ ಆಗ ಅದರಲ್ಲಿ ಹಲವಾರು ಹಣದ ಚೀಲಗಳು ಪತ್ತೆಯಾಗಿದೆ. ಆ ಚೀಲಗಳಲ್ಲಿ ಸುಮಾರು 75 ಸಾವಿರ ರೂ.ನಷ್ಟು ಹಣ ಪತ್ತೆಯಾಗಿದೆ. ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆ ಬಳಿಕ ಈಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಆಕೆ ಇದೇ ರೀತಿ ಹಲವಾರು ಜಾತ್ರೆ, ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನಸಂದಣಿ ಇರುವ ಸ್ಥಳಗಳಿಗೆ ತೆರಳಿ ಪಿಕ್ ಪಾಕೆಟ್ ಮಾಡುತ್ತಿರುವುದಾಗಿ ಬಾಯಿ ಬಿಟ್ಟಿದ್ದಾಳೆ. ಒಬ್ಬ ನಟಿಯಾಗಿ ಅದು ಹೇಗೆ ಆಕೆ ಪರ್ಸ್ ಕದಿಯುತ್ತಾರೆ ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ. ರೂಪಾ ದತ್ತಾ ಜನಪ್ರಿಯ ನಟಿ, ಅವರು ಅನೇಕ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಪೊಲೀಸರು ಈ ಬಗ್ಗೆ ತನಿಖೆ ಮುಂದುವರೆಸಿದ್ದಾರೆ. ಅಭಿಮಾನಿಗಳು ಮಾತ್ರ ಶಾಕ್ ಆಗಿದ್ದಾರೆ.