-->
ಯುವಕನ ಚೂರಿಯಿಂದ ಇರಿದು ಹತ್ಯಗೈದು ಪರಾರಿಯಾದ ದುಷ್ಕರ್ಮಿಗಳು: ಅನ್ಯಮತೀಯ ಯುವತಿಯ ವಿವಾಹ ಕಾರಣ?

ಯುವಕನ ಚೂರಿಯಿಂದ ಇರಿದು ಹತ್ಯಗೈದು ಪರಾರಿಯಾದ ದುಷ್ಕರ್ಮಿಗಳು: ಅನ್ಯಮತೀಯ ಯುವತಿಯ ವಿವಾಹ ಕಾರಣ?

ಕಲಬುರಗಿ: ದುಷ್ಕರ್ಮಿಗಳು ಚಾಕುವಿನಿಂದ ಇರಿದು ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ನಗರದ ಪಿಎನ್ ಟಿ ಕ್ವಾಟರ್ಸ್ ಬಳಿ ತಡರಾತ್ರಿ‌ ನಡೆದಿದೆ.

ಪಿಎನ್​ಟಿ ಕ್ವಾಟರ್ಸ್ ನಿವಾಸಿ ಪ್ರೀತಂ ಬನ್ನಿಕಟ್ಟಿ ಹತ್ಯೆಯಾದ ಯುವಕ.

ಪ್ರೀತಂ ಬನ್ನಿಕಟ್ಟಿ ಕೆಲ ತಿಂಗಳ ಹಿಂದಷ್ಟೇ ಅನ್ಯ ಧರ್ಮದ ಯುವತಿಯೋರ್ವಳನ್ನು ಪ್ರೀತಿಸಿ ವಿವಾಹವಾಗಿದ್ದ ಎನ್ನಲಾಗಿದೆ‌. ಈ ಹಿನ್ನೆಲೆಯಲ್ಲಿ ಈ ಹತ್ಯೆಯಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ‌.

ನಿನ್ನೆ ರಾತ್ರಿ ಪ್ರೀತಂನನ್ನು ಕೆಲ ದುಷ್ಕರ್ಮಿಗಳು ಹಿಂಬಾಲಿಸಿಕೊಂಡು ಬಂದು ಚಾಕುವಿನಿಂದ ಇರಿದು ಹತ್ಯೆಗೈದು ಪರಾರಿಯಾಗಿದ್ದಾರೆ. ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ‌.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article