-->

ಹಾಟ್ ವೀಡಿಯೋ ಹರಿಯಬಿಡಬೇಡಿ ಎಂದು ಮಲಯಾಳಂ ಬೆಡಗಿ ಮೀರಾ ಜಾಸ್ಮಿನ್ ಗೆ ಅಭಿಮಾನಿಗಳ ಮನವಿ

ಹಾಟ್ ವೀಡಿಯೋ ಹರಿಯಬಿಡಬೇಡಿ ಎಂದು ಮಲಯಾಳಂ ಬೆಡಗಿ ಮೀರಾ ಜಾಸ್ಮಿನ್ ಗೆ ಅಭಿಮಾನಿಗಳ ಮನವಿ

ಕೊಚ್ಚಿ: ಒಂದು ಕಾಲದಲ್ಲಿ ಭಾರೀ ಬೇಡಿಕೆಯ ನಟಿಯಾಗಿದ್ದ ಮಲಯಾಳಂ ಬ್ಯೂಟಿ ಮೀರಾ ಜಾಸ್ಮಿನ್​ ಕಾಲಾನಂತರದಲ್ಲಿ ಕಣ್ಮರೆಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿಯೂ ಅವರು ಕಾಣುತ್ತಿರಲಿಲ್ಲ. ಮೀರಾ ಜಾಸ್ಮಿನ್​ ಎಲ್ಲಿ ಹೋಗಿದ್ದಾರೆಂದು ಬಹುತೇಕರು ಹುಡುಕಾಟ ನಡೆಸುತ್ತಿದ್ದರು. ಮದುವೆ ಬಳಿಕ ಚಿತ್ರರಂಗದಿಂದ ದೂರವಾಗಿದ್ದ ಮೀರಾ ಜಾಸ್ಮಿನ್​, ಕಳೆದ ಜನವರಿಯಲ್ಲಿ ಇನ್​ಸ್ಟಾಗ್ರಾಂಗೆ ಮತ್ತೆ ಪ್ರವೇಶ ಪಡೆದಿದ್ದಾರೆ.

ಜ.20ರಂದು ತಮ್ಮ ಇನ್​ಸ್ಟಾಗ್ರಾಂ ಖಾತೆಯನ್ನು ತೆರೆದಿದ್ದ ಮೀರಾ ಜಾಸ್ಮಿನ್​ ಇನ್ನು ಮುಂದೆ ತಾನು ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತೇನೆಂದು ಹೇಳಿಕೊಂಡಿದ್ದರು. ಅಭಿಮಾನಿಗಳಿಗೂ ಇದು ಸಂತಸ ತಂದಿತ್ತು. ಅಂದಿನಿಂದ ನಿರಂತರವಾಗಿ ಫೋಟೊ ಹಾಗೂ ವೀಡಿಯೋಗಳನ್ನು ಶೇರ್​ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಇದೀಗ ಹಾಟ್​ ವೀಡಿಯೋವೊಂದನ್ನು ಮೀರಾ ಜಾಸ್ಮಿನ್, ಇನ್​ಸ್ಟಾಗ್ರಾಂನಲ್ಲಿ ಹರಿಯಬಿಟ್ಟಿದ್ದಾರೆ. ಎದೆಯ ಸೀಳು ಕಾಣುವಂತಹ ಗೌನ್​​ ಧರಿಸಿರುವ ಅವರು ತೂಗುಯ್ಯಾಲೆಯ ಮೇಲೆ ಕುಳಿತು ಕ್ಯಾಮರಾ ಮುಂಭಾಗದಲ್ಲಿ ಮಾದಕ ನೋಟವನ್ನು ಬೀರಿದ್ದಾರೆ. ಮೀರಾ ಜಾಸ್ಮಿನ್ ಅವರ ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಈಗಾಗಲೇ 19 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದೆ. 

ಈ ಹಾಟ್ ವೀಡಿಯೋ ನೋಡಿದ ಅನೇಕರು ಮೀರಾ ಜಾಸ್ಮಿನ್ ಹಾಟ್​ ಅವತಾರಕ್ಕೆ ಬೋಲ್ಡ್​ ಆಗಿ ಕಾಮೆಂಟ್​ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಹಿಂದಿನಿಂದಲೂ ಮೀರಾ ಜಾಸ್ಮಿನ್ ರನ್ನು ಸಾಂಪ್ರದಾಯಕ ಹುಡುಗಿಯ ಪಾತ್ರದಲ್ಲಿ ನೋಡಿ ಖುಷಿಪಟ್ಟ ಅಭಿಮಾನಿಗಳು ಈ ರೀತಿಯ ಫೋಟೋ ಶೂಟ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. 

ಈ ಹಿಂದೆ ಮೀರಾ​ ಶಾಪಿಂಗ್​ ಮಾಡುವ ವೇಳೆ ದಿಢೀರ್​ ಪ್ರತ್ಯಕ್ಷರಾಗಿದ್ದರು. ಆಗ ಅವರು ಬಹಳ ದಪ್ಪವಾಗಿದ್ದರು. ಇದೀಗ ಸ್ಲಿಮ್​ ಆಗಿ ಕಾಣುತ್ತಿರುವ ಮೀರಾ​​ ಮತ್ತೆ ತಮ್ಮ ಮಾದಕ ನೋಟವನ್ನು ಬೀರಿದ್ದಾರೆ. ಮೀರಾ ಜಾಸ್ಮಿನ್ 2014ರಲ್ಲಿ ಅನಿಲ್​ ಜಾನ್​ ಟಿಟನ್​ ಎಂಬುವರನ್ನು ಮದುವೆಯಾಗಿದ್ದಾರೆ. ಅವರ ಪತಿ ದುಬೈನಲ್ಲಿ ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದಾರೆ. 2016ರಿಂದಲೇ ಅವರು ಸಿನಿಮಾ ಕ್ಷೇತ್ರದಿಂದ ಅಂತರ ಕಾಯ್ದುಕೊಂಡಿದ್ದರು. 

ಮದುವೆಯಾದ ಬಳಿಕ ಮಾನಸಿಕ ಸಮಸ್ಯೆಯಿಂದ ಮೀರಾ​​ ತಮ್ಮ ಪತಿಯಿಂದ ಬೇರೆಯಾಗಿದ್ದಾರೆ. ಮತ್ತೆ ಸಿನಿಮಾ ಕಡೆ ಒಲವು ತೋರಿಸಿರುವ ಮೀರಾ​, ಸಿಕ್ಕಾಪಟ್ಟೆ ಬೋಲ್ಡ್​ ಫೋಟೋಗಳನ್ನು ಹರಿಬಿಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಮಲಯಾಳಂ ಸಿನಿಮಾವೊಂದನ್ನು ಘೋಷಣೆ ಮಾಡಿದ್ದಾರೆ. ಆಫರ್​ಗಳು ಬಂದರೆ ಎಲ್ಲಾ ಭಾಷೆಗಳಲ್ಲೂ ನಟಿಸುವುದಾಗಿ ಹೇಳಿಕೊಂಡಿದ್ದಾರೆ. 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

  

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100