-->

ಪಾಕಿಸ್ತಾನಿ ಯುವತಿಯನ್ನು ವಿವಾಹವಾದ ಬೆನ್ನಲ್ಲೇ ಆತ್ಮಾಹುತಿ ದಾಳಿಗೆ ಬಲಿಯಾದ ಕೇರಳ ಮೂಲದ ಎಂಟೆಕ್ ವಿದ್ಯಾರ್ಥಿ

ಪಾಕಿಸ್ತಾನಿ ಯುವತಿಯನ್ನು ವಿವಾಹವಾದ ಬೆನ್ನಲ್ಲೇ ಆತ್ಮಾಹುತಿ ದಾಳಿಗೆ ಬಲಿಯಾದ ಕೇರಳ ಮೂಲದ ಎಂಟೆಕ್ ವಿದ್ಯಾರ್ಥಿ

ತಿರುವನಂತಪುರಂ: ಪಾಕಿಸ್ತಾನಿ ಯುವತಿಯನ್ನು ವಿವಾಹವಾಗಿ ಇಸ್ಲಾಮಿಕ್​ ಸ್ಟೇಟ್​ ಉಗ್ರ ಸಂಘಟನೆ ಸೇರಲು ಕೇರಳದಿಂದ ಅಫ್ಘಾನಿಸ್ತಾನಕ್ಕೆ ಹೋಗಿದ್ದ ಎಂಟೆಕ್​ ವಿದ್ಯಾರ್ಥಿಯೋರ್ವನು ಆತ್ಮಾಹುತಿ ದಾಳಿಯಲ್ಲಿ ಮೃತಪಟ್ಟಿರುವುದಾಗಿ ಇಸ್ಲಾಮಿಕ್ ಸ್ಟೇಟ್-ಖೊರಾಸಾನ್ ಪ್ರಾಂತ್ಯ (ಐಎಸ್​ಕೆಪಿ)ದ ಮುಖವಾಣಿ ವಾಯ್ಸ್ ಆಫ್ ಖುರಾಸನ್ ತಿಳಿಸಿದೆ. 

ನಜೀಬ್​ ಅಲ್​ ಹಿಂಡಿ(23) ಮೃತಪಟ್ಟಾತ. ಈತ ಕೇರಳದ ಮೂಲದ ಎಂಟೆಕ್​ ವಿದ್ಯಾರ್ಥಿ. ವಾಯ್ಸ್ ಆಫ್ ಖುರಾಸನ್ ಪ್ರಕಟಿಸಿರುವ ಸುದ್ದಿಯಲ್ಲಿ ಈತನ ಸಾವಿನ ಬಗ್ಗೆ ಬೇರೆ ಯಾವುದೇ ಮಾಹಿತಿ ಇಲ್ಲ. ನಜೀಬ್​ ಯಾವಾಗ ಮೃತಪಟ್ಟ ಮತ್ತು ಅವನ ಸಾವಿನ ಸಂದರ್ಭಗಳನ್ನು ಸಹ ನಮೂದಿಸಿಲ್ಲ. ವಾಯ್ಸ್ ಆಫ್ ಖುರಾಸನ್ ವರದಿ ನೀಡಿರುವ ಪ್ರಕಾರ, ನಜೀಬ್ ಐಎಸ್​ಕೆಪಿ ಇರುವ ಅಫ್ಘಾನಿಸ್ತಾನದ ಖೊರಾಸಾನ್‌ ಸೇರ್ಪಡೆಗೊಳ್ಳಲು ಭಾರತದಲ್ಲಿ ಬಹಕಷ್ಟಕರ ಮಾರ್ಗವನ್ನು ದಾಟಿ ಪ್ರಯಾಣಿಸಿದ್ದರು ಎಂದು ತಿಳಿದುಬಂದಿದೆ. 

ಮೃತಪಟ್ಟ ನಜೀಬ್​ನನ್ನು ಕೊಂಡಾಡಿರುವ ಐಎಸ್​ಕೆಪಿ, ನಜೀಬ್​ ಎಷ್ಟೇ ತೊಂದರೆಗಳನ್ನು ಎದುರಿಸಿದರೂ ಐಎಸ್​ಕೆಪಿ ಹೋರಾಟಗಾರನಾಗಿ ತನ್ನ ಜಿಹಾದ್ ಕಾರ್ಯವನ್ನು ಮುಂದುವರಿಸಿದ್ದರು. ನಜೀಬ್, ಐಎಸ್‌ಗಾಗಿ ಹೋರಾಟದ ಬಗ್ಗೆ ತನ್ನ ಗಮನಹರಿಸಿದ್ದರು. ಆತನಿಗೆ ಮದುವೆಯಾಗಲು ಇಷ್ಟವಿರಲಿಲ್ಲ. ಆದರೆ, ಆತನ ಸ್ನೇಹಿತರ ಒತ್ತಾಯದ ಮೇರೆಗೆ ಪಾಕಿಸ್ತಾನಿ ಕುಟುಂಬದ ಇನ್ನೊಬ್ಬ ಜಿಹಾದಿ ಹುಡುಗಿಯನ್ನು ಮದುವೆಯಾಗಿದ್ದಾನೆ ಎಂದು ಹೇಳಿದೆ. ಇದಾದ ಬಳಿಕವೇ ನಜೀಬ್​ನನ್ನು ‘ಕುಫರ್’ಗಳ ವಿರುದ್ಧ ಆತ್ಮಹತ್ಯಾ ದಾಳಿಗೆ ಐಎಸ್​ಕೆಪಿ ಬಳಸಿಕೊಂಡಿದೆ ಎಂದು ತಿಳಿದುಬಂದಿದೆ. 

Ads on article

Advertise in articles 1

advertising articles 2

Advertise under the article