Tollgate ವಿರುದ್ಧ ಹೋರಾಟಗಾರನಿಗೆ ಬೆತ್ತಲೆ ದೇಹ ಪ್ರದರ್ಶಿಸಿ ಹಲ್ಲೆ ನಡೆಸಲು ಯತ್ನಿಸಿದ ಮಂಗಳಮುಖಿಯರು ಅರೆಸ್ಟ್!

ಮಂಗಳೂರು: ನಗರದ ಸುರತ್ಕಲ್ ಬಳಿಯಿರುವ ಎನ್ಐಟಿಕೆ ಟೋಲ್ ಗೇಟ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ಸಾಮಾಜಿಕ ಕಾರ್ಯಕರ್ತನೊಂದಿಗೆ ಅಸಭ್ಯವಾಗಿ ವರ್ತಿಸಿ ಬೆತ್ತಲೆ ದೇಹ ಪ್ರದರ್ಶಿಸಿ ಹಲ್ಲೆಗೆತ್ನಿಸಿದ ಆರು ಮಂದಿ  ಮಂಗಳಮುಖಿಯರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ವಾಸವಿ ಗೌಡ, ಲಿಪಿಕಾ , ಹಿಮಾ, ಆದ್ಯ, ಮಾಯಾ , ಮೈತ್ರಿ ಬಂಧಿತ ಮಂಗಳಮುಖಿಯರು. ಸುರತ್ಕಲ್ ಎನ್ಐಟಿಕೆ ಬಳಿ ಅನಧಿಕೃತವಾಗಿ ಟೋಲ್ ಗೇಟ್ ಕಾರ್ಯಾಚರಿಸುತ್ತಿದೆ ಎಂದು ಆರೋಪಿಸಿ ಟೋಲ್ ತೆರವು ಮಾಡಬೇಕೆಂದು ಸಾಮಾಜಿಕ ಕಾರ್ಯಕರ್ತ ಆಪದ್ಬಾಂಧವ ಆಸಿಫ್ ಫೆ.7ರಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ನಿನ್ನೆ ಮಧ್ಯರಾತ್ರಿ 12.30ಕ್ಕೆ ಏಕಾಏಕಿ ಆರು ಮಂದಿ ಮಂಗಳಮುಖಿಯರು ಆಸೀಫ್ ಪ್ರತಿಭಟನೆ ನಡೆಸುತ್ತಿದ್ದಲ್ಲಿಗೆ ಬಂದು ಸಾರ್ವಜನಿಕ ಸ್ಥಳದಲ್ಲಿ ತಮ್ಮ ಖಾಸಗಿ ಅಂಗಾಂಗ ಪ್ರದರ್ಶಿಸಿ ಅಸಭ್ಯ ವರ್ತಿಸಿದ್ದಾರೆ. ಅಲ್ಲದೆ ಪ್ರಾಣ ಬೆದರಿಕೆಯನ್ನು ಒಡ್ಡಿದ್ದಾರೆ ಎನ್ನಲಾಗಿದೆ. 

ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು. ಇಂದು ಪೊಲೀಸರು ಆರೋಪಿಗಳಾದ 6 ಮಂದಿ ಮಂಗಳಮುಖಿಯರನ್ನು  ಬಂಧಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ದುರ್ವರ್ತನೆ ತೋರಿದ ಆರೋಪದಲ್ಲಿ ಇವರ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಐ.ಪಿ.ಸಿ 504, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu