
ಮದ್ಯದ ಮತ್ತಲ್ಲಿ ಸ್ನೇಹಿತರ ಮಧ್ಯೆ ಬಾರ್ನಲ್ಲಿ ಆರಂಭವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ
2/12/2022 10:01:00 PM
ಮೈಸೂರು: ಮದ್ಯದ ಮತ್ತಲ್ಲಿ ಸ್ನೇಹಿತರ ಮಧ್ಯೆ ಬಾರ್ನಲ್ಲಿ ಆರಂಭವಾದ ಜಗಳ, ಬಾರ್ನಿಂದ ಹೊರಬಂದ ಬಳಿಕವೂ ಮುಂದುವರೆದು ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.
ಮೈಸೂರಿನ ಆಲನಹಳ್ಳಿಯಲ್ಲಿ ಈ ಪ್ರಕರಣ ನಡೆದಿದೆ. ಆಲನಹಳ್ಳಿ ಬಾರ್ ಆ್ಯಂಡ್ ರೆಸ್ಟೋರೆಂಟ್ವೊಂದರಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಸಂದರ್ಭ ಸ್ನೇಹಿತರ ಮಧ್ಯೆ ಜಗಳ ಆರಂಭವಾಗಿತ್ತು. ನಿವೇಶನವೊಂದರ ವಿಚಾರವಾಗಿ ಶುರುವಾದ ಈ ಜಗಳ ಬಾರ್ನಿಂದ ಹೊರಬಂದ ಬಳಿಕವೂ ಮುಗಿದಿರಲಿಲ್ಲ.
ಬಾರ್ನಿಂದ ಹೊರಬಂದಾಗ ನಡೆದ ವಾಗ್ವಾದದ ಸಂದರ್ಭ ಸ್ನೇಹಿತರಾದ ರಾಕೇಶ್, ಮಹೇಶ್, ಪ್ರಮೋದ್ ಅವರು ಕಿರಣ್ಗೆ ಚಾಕುವಿನಿಂದ ಇರಿದಿದ್ದರು. ಗಾಯಗೊಂಡ ಕಿರಣ್ ಸಾವಿಗೀಡಾಗಿದ್ದು, ರಾಕೇಶ್ ಹಾಗೂ ಮಹೇಶ್ನನ್ನು ಆಲನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪ್ರಮೋದ್ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಹುಡುಕಾಟ ಮುಂದುವರಿದಿದೆ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.