-->

ಹೃದಯಾಘಾತದಿಂದ ಆರ್​ಜೆ ರಚನಾ ಮೃತ್ಯು!

ಹೃದಯಾಘಾತದಿಂದ ಆರ್​ಜೆ ರಚನಾ ಮೃತ್ಯು!

ಬೆಂಗಳೂರು: ತಮ್ಮ ಪಟಪಟನೆ ಮಾತನಾಡುವ ಧ್ವನಿಯಿಂದಲೇ, ಅಸಂಖ್ಯಾತ ಜನರ ಮನಗೆದ್ದಿದ್ದ ಆರ್​ಜೆ ರಚನಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

39 ವರ್ಷದ ರಚನಾ, ಹೃದಯಾಘಾತದಿಂದ ನಿಧನರಾಗಿದ್ದು ಅವರ ಅಸಂಖ್ಯಾತ ಅಭಿಮಾನಿಗಳಲ್ಲಿ ದುಃಖವನ್ನು ತಂದಿದೆ. ರೇಡಿಯೋ ಮಿರ್ಚಿಯಲ್ಲಿ ಆರ್​ಜೆಯಾಗಿ ವೃತ್ತಿ ನಿರ್ವಹಿಸುತ್ತಿದ್ದ ರಚನಾ, ತನ್ನ ಮಾತಿನ ಮೂಲಕವೇ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿದ್ದರು.

ತಮ್ಮ ಫಟಾಫಟ್​ ಮಾತಿನ ಮೂಲಕ ಜನರ ಮನಗೆದ್ದಿದ್ದ ಮುದ್ದು ಮುಖದ ರಚನಾ, 7 ವರ್ಷ ಆರ್​ಜೆಯಾಗಿ ಕೆಲಸ ಮಾಡಿದ್ದರು. ರಾಜ್ಯಾದ್ಯಂತ ಮನೆಮಾತಾಗಿದ್ದ ರಚನಾ, ಬಹಳ ಸಣ್ಣ ವಯಸ್ಸಿಗೇ ಬದುಕಿನ ಪಯಣ ಮುಗಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಆರ್ ಜೆ ಕೆಲಸವನ್ನು ಬಿಟ್ಟು ಮನೆಯಲ್ಲೇ ಇದ್ದ ರಚನಾ, ಇತ್ತೀಚಿಗೆ ಜೆಪಿ ನಗರದ ಅಪಾರ್ಟ್​ಮೆಂಟ್​ನಲ್ಲಿ ಒಬ್ಬಂಟಿಯಾಗಿ ವಾಸವಿದ್ದರು. ಮಾನಸಿಕವಾಗಿ ಬಹಳ ಕುಗ್ಗಿದ್ದರು ಎನ್ನಲಾಗುತ್ತಿದೆ. ಇಂದು ಮನೆಯಲ್ಲೇ ಹೃದಯಾಘತಕ್ಕೀಡಾಗಿ ಮೃತಪಟ್ಟಿದ್ದಾರೆ.  

 ‘ಸಿಂಪಲ್ಲಾಗಿ ಒಂದ್​ ಲವ್​ ಸ್ಟೋರಿ’ ಸಿನಿಮಾದಲ್ಲಿ ಆರ್​ಜೆ ರಚನಾ ರಕ್ಷಿತ್​ ಶೆಟ್ಟಿ ಸಹೋದರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ರೇಡಿಯೋ ಸಿಟಿ, ರೇಡಿಯೋ ಮಿರ್ಚಿ ಸೇರಿದಂತೆ ಹಲವಾರು ಎಫ್ಎಂಗಳಲ್ಲಿ ಆರ್​ಜೆಯಾಗಿ ರಚನಾ ಕೆಲಸ ಮಾಡಿದ್ದರು.

Ads on article

Advertise in articles 1

advertising articles 2

Advertise under the article