-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ತನ್ನದೇ ಬೆತ್ತಲೆ ವೀಡಿಯೋ, ಫೋಟೋಗಳನ್ನು ಕಳುಹಿಸಿ ಇನ್ನಿಲ್ಲದಂತೆ ಕಾಡುತ್ತಿದ್ದ ವಿಕೃತ ಕಾಮುಕ ಕೊನೆಗೂ ಅಂದರ್

ತನ್ನದೇ ಬೆತ್ತಲೆ ವೀಡಿಯೋ, ಫೋಟೋಗಳನ್ನು ಕಳುಹಿಸಿ ಇನ್ನಿಲ್ಲದಂತೆ ಕಾಡುತ್ತಿದ್ದ ವಿಕೃತ ಕಾಮುಕ ಕೊನೆಗೂ ಅಂದರ್

ಬೆಂಗಳೂರು: ಅಪರಿಚಿತ ಮಹಿಳೆಯರಿಗೆ ವಿಕೃತ ಕಾಮಿಯೊಬ್ಬ ಅಶ್ಲೀಲ ಫೋಟೋ, ವೀಡಿಯೊಗಳನ್ನು ಶೇರ್ ಮಾಡಿ ವಿಕೃತ ಸಂತೋಷ ಪಡುತ್ತಿದ್ದ. ಹಗಲು-ರಾತ್ರಿ ಎನ್ನದೆ ತನ್ನ ಬೆತ್ತಲೆ ಫೋಟೋಗಳನ್ನು, ವೀಡಿಯೋಗಳನ್ನು ಕಳುಹಿಸಿ  ಕಿರಿಕಿರಿ ಮಾಡುತ್ತಿದ್ದ. ಇದೀಗ ಈ ವಿಕೃತ ಕಾಮಿಯನ್ನು ಆಗ್ನೇಯ ವಿಭಾಗ ಸಿಇಎನ್​ ಪೊಲೀಸರು ಬಂಧಿಸಿದ್ದಾರೆ. 

ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ನಿವಾಸಿ ಹರೀಶ್​ (27) ಬಂಧಿತ ವಿಕೃತ ಕಾಮುಕ. 

ಜೆಸಿಬಿ ಚಾಲಕನಾಗಿದ್ದ ಹರೀಶ್​, ಫೇಸ್​ಬುಕ್​ ಹಾಗೂ ಟ್ವಿಟರ್​ ಗಳಲ್ಲಿ ಮಹಿಳೆಯರಿಗೆ ಫ್ರೆಂಡ್​ ರಿಕ್ವೆಸ್ಟ್ ಕಳುಹಿಸುತ್ತಿದ್ದ. ಅತ್ತಕಡೆಯಿಂದ ಅಸೆಪ್ಟ್ ಸಂದೇಶ ಬಂದ ತಕ್ಷಣ ಅವರಲ್ಲಿ  ವಾಟ್ಸ್​ಆ್ಯಪ್​ ಸಂಖ್ಯೆ ಕೇಳುತ್ತಿದ್ದ. ಯಾರಾದರೂ ಮಹಿಳೆಯರ ಮೊಬೈಲ್​ ನಂಬರ್ ಸಿಕ್ಕರೆ ಸಾಕು ಅವರಿಗೂ ವಾಟ್ಸ್ಆ್ಯಪ್​ ಕಾಲ್​ ಮಾಡುತ್ತಿದ್ದ. ವಾಟ್ಸ್​ಆ್ಯಪ್​ ಮತ್ತು ಮೇಸೆಂಜರ್​ನಲ್ಲಿ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸುತ್ತಿದ್ದ. ಕೆಲವರಿಗೆ ತನ್ನ ಬೆತ್ತಲೆ ಫೋಟೋಗಳನ್ನು ಕಳುಹಿಸಿ ವಿಕೃತಿ ಮೆರೆಯುತ್ತಿದ್ದ. 

ಕಳೆದ 3 ತಿಂಗಳಿನಿಂದ ಹಗಲು-ರಾತ್ರಿ ಎನ್ನದೆ ಬಿಳೆಕಳ್ಳಿ ನಿವಾಸಿ ಮಹಿಳೆಯೋರ್ವರ ಮೊಬೈಲ್​ಗೆ ಹರೀಶ್​ ವಾಟ್ಸ್​ಆ್ಯಪ್​ ಕಾಲ್​ ಮಾಡುತ್ತಿದ್ದ. ಕರೆ ಸ್ವೀಕರಿಸದಿದ್ದರೆ ಅಶ್ಲೀಲ ಫೋಟೋವನ್ನು ಕಳುಹಿಸಿ ಕಿರುಕುಳ ಕೊಡುತ್ತಿದ್ದ. ನೊಂದ ಮಹಿಳೆ, ತನ್ನ ಪತಿಗೆ ವಿಷಯ ತಿಳಿಸಿದ್ದಳು. ಈ ಕುರಿತು ಸಂತ್ರಸ್ತೆ ಪತಿ ಫೆ.16ರಂದು ಆಗ್ನೇಯ ವಿಭಾಗ ಸಿಇಎನ್​ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿ ಮೊಬೈಲ್​ ನಂಬರ್​ನ ಸಿಡಿಆರ್​ ಮಾಹಿತಿಯನ್ನು ಆಧರಿಸಿ ಬಂಧಿಸಿದ್ದಾರೆ. ಈ ವಿಕೃತ ಕಾಮುಕ ಇದೇ ರೀತಿ 10ಕ್ಕೂ ಅಧಿಕ ಮಹಿಳೆಯರಿಗೆ ಕಿರುಕುಳ ಕೊಟ್ಟಿರುವುದು ಬೆಳಕಿಗೆ ಬಂದಿದೆ.

Ads on article

Advertise in articles 1

advertising articles 2

Advertise under the article

ಸುರ