-->
ರಷ್ಯಾ: ಕೆಲಸವಿಲ್ಲದೆ ಬೋರ್​ ಆಗಿದೆಯೆಂದು 7.5ಕೋಟಿ ರೂ. ಬೆಲೆಬಾಳುವ ಪೇಂಟಿಂಗ್​ ಗೆ ಕಣ್ಣು ಬಿಡಿಸಿರುವ ಸೆಕ್ಯುರಿಟಿ ಗಾರ್ಡ್ ಕೆಲಸದಿಂದ ವಜಾ

ರಷ್ಯಾ: ಕೆಲಸವಿಲ್ಲದೆ ಬೋರ್​ ಆಗಿದೆಯೆಂದು 7.5ಕೋಟಿ ರೂ. ಬೆಲೆಬಾಳುವ ಪೇಂಟಿಂಗ್​ ಗೆ ಕಣ್ಣು ಬಿಡಿಸಿರುವ ಸೆಕ್ಯುರಿಟಿ ಗಾರ್ಡ್ ಕೆಲಸದಿಂದ ವಜಾ

ರಷ್ಯಾ: ಕೆಲಸವಿಲ್ಲದೆ ಬೋರ್​ ಆಗಿದೆಯೆಂದು ಸೆಕ್ಯುರಿಟಿ ಗಾರ್ಡ್ ಮುಖವಿದ್ದ ಪೇಂಟಿಂಗ್​ ಗೆ ಕಣ್ಣನ್ನು ಚಿತ್ರಿಸಿದ್ದಾನೆ. ಸದ್ಯ ಚಿತ್ರ ವಿರೂಪಗೊಳಿಸಿರುವ ಆರೋಪದ ಮೇಲೆ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ಈ ಸೆಕ್ಯುರಿಟಿ ಗಾರ್ಡ್ ಗೆ ಮಾಡಲು ಏನೂ ಕೆಲಸವಿಲ್ಲದೆ ಬೋರ್​ ಬಂದಿದೆ. ಇದರಿಂದ ಆತ ಏನಾದರೂ ಮಾಡಬೇಕೆಂದು ರಷ್ಯಾದ ಆರ್ಟ್​ ಗ್ಯಾಲರಿಯಲ್ಲಿ 7 ಕೋಟಿ ರೂ. ಬೆಲೆಬಾಳುವ ಅಂಗಾಂಗಗಳನ್ನು ಚಿತ್ರಿಸದ ಮುಖದ ವರ್ಣಚಿತ್ರಕ್ಕೆ ಕಣ್ಣನ್ನು ಬಿಡಿಸಿದ್ದಾನೆ.  ವರ್ಣಚಿತ್ರಗಳು ಅಥವಾ ಆರ್ಟ್​ ಗ್ಯಾಲರಿಯಲ್ಲಿರುವ ಚಿತ್ರಗಳು ಅದರದ್ದೇ ಆದ ಅರ್ಥವನ್ನು ಹೊಂದಿರುತ್ತದೆ. ಮುಖವಿರಲಿ, ಇಲ್ಲದೆ ಇರಲಿ, ಬಿಳಿ ಹಾಳೆಯ ಮೇಲೆ ಒಂದು ಗೆರೆ ಎಳೆದಿದ್ದರೂ ಆ  ಪೇಯಿಂಟಿಗ್​ ಕೋಟಿ ರೂ.ಗಳಿಗೆ ಮಾರಾಟವಾದ ಉದಾಹರಣೆಗಳಿವೆ. ಹೀಗಿದ್ದಾಗ ಬೋರ್​ ಆಗಿದೆ ಎಂದು ಈತ  ಪೇಂಟಿಂಗ್​ ಮೇಲೆ ಕಣ್ಣನ್ನು ಚಿತ್ರಿಸಿದ್ದಾನೆ. ಸದ್ಯ ಈತನನ್ನು ಚಿತ್ರ ವಿರೂಪಗೊಳಿಸಿದ್ದಾನೆ ಎಂದು ಕೆಲಸದಿಂದ ವಜಾಗೊಳಿಸಲಾಗಿದೆ.


ರಷ್ಯಾದ ಯೆಕಟೆರಿನ್ ಬರ್ಗ್ ಪ್ರದೇಶದ ಯೆಲ್ಟ್ಸಿನ್ ಆರ್ಟ್​ ಗ್ಯಾಲರಿಲ್ಲಿ ಈ ಘಟನೆ ನಡೆದಿದೆ. ಚಿತ್ರದ ಮೇಲೆ ಕಣ್ಣು ಬಿಡಿಸಿರುವ ಸೆಕ್ಯುರಿಟಿ ಗಾರ್ಡ್​ ಅನ್ನು ಕೆಲಸದಿಂದ ವಜಾಗೊಳಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆತ ವಿರೂಪಗೊಳಿಸಿದ ಚಿತ್ರವನ್ನು 1930ರಲ್ಲಿ ರಚಿಸಲಾಗಿತ್ತು ಎನ್ನಲಾಗಿದೆ. ಈ ಪೇಂಟಿಂಗ್ ಸುಮಾರು 7.5 ಕೋಟಿ ರೂ.ಗಳಿಗೆ  ಇನ್ಸುರೆನ್ಸ್​ ಮಾಡಿಸಲಾಗಿದ್ದು, ಪ್ರದರ್ಶನಕ್ಕೆ ಇರಿಸಲಾಗಿತ್ತು ಎಂದು ವರದಿ ತಿಳಿಸಿದೆ. 

ಸದ್ಯ ಸೆಕ್ಯುರಿಟಿ ಗಾರ್ಡ್​ ಬಗ್ಗೆ ಯಾವುದೇ ಮಾಹಿತಿಯನ್ನು ಪೊಲೀಸರು ಹೊರಹಾಕಿಲ್ಲ. ಆದರೆ ಆರೋಪ ಸಾಬೀತಾದಲ್ಲಿ ಶಿಕ್ಷೆ ವಿಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲ್​ ಪೆನ್​ಗಳಿಂದ ಎರಡು ಚಿತ್ರಗಳಿಗೆ ಕಣ್ಣನ್ನು ಬಿಡಿಸಿದ್ದಾನೆ ಎಂದು ಹೇಳಲಾಗಿದೆ.  ಚಿತ್ರಬಿಡಿಸಿದ ಕಣ್ಣುಗಳ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay RS 100

  

Advertise under the article