-->
2019 ರ ಚುನಾವಣೆಯಲ್ಲಿ ಮಾದಕ ನೋಟದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದ ಚುನಾವಣಾಧಿಕಾರಿ ರೀನಾ ದ್ವಿವೇದಿ ಈ ಬಾರಿ ಮತ್ತೆ ಹಾಟ್ ಅವತಾರದಲ್ಲಿ!

2019 ರ ಚುನಾವಣೆಯಲ್ಲಿ ಮಾದಕ ನೋಟದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದ ಚುನಾವಣಾಧಿಕಾರಿ ರೀನಾ ದ್ವಿವೇದಿ ಈ ಬಾರಿ ಮತ್ತೆ ಹಾಟ್ ಅವತಾರದಲ್ಲಿ!

ಲಖನೌ: ಉತ್ತರ ಪ್ರದೇಶದಲ್ಲಿ 2017ರ ವಿಧಾನಸಭಾ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮಾದಕ ನೋಟದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದ್ದ ಚುನಾವಣಾ ಅಧಿಕಾರಿ ರೀನಾ ದ್ವಿವೇದಿ ಇದೀಗ ಮತ್ತೊಮ್ಮೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ವೈರಲ್​ ಆಗಿದೆ. 

ಇವಿಎಂ ಹಿಡಿದುಕೊಂಡು ಹೋಗುತ್ತಿರುವ ಅವರ ಫೋಟೋಗಳು ಭಾರೀ ರೀತಿಯಲ್ಲಿ ವೈರಲ್​ ಆಗುತ್ತಿದೆ. ಕಳೆದ ಬಾರಿ ರೀನಾ ದ್ವಿವೇದಿಯವರು ಸಾಂಪ್ರದಾಯಿಕ ಹಳದಿ ಸೀರೆಯಲ್ಲಿ ಮಾದಕವಾಗಿ ಕಾಣಿಸಿಕೊಂಡಿದ್ದರು. ಇದೋಗ ಹಾಟ್ ಆಗಿ ಹೊಸ ಅವತಾರದಲ್ಲಿ ಕಾಣಸಿಕೊಳ್ಳುವ ಮೂಲಕ ಮತ್ತೊಮ್ಮೆ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. 


ಈ ಬಾರಿ ರೀನಾ ದ್ವಿವೇದಿ ಕಪ್ಪು ಬಣ್ಣದ ಸ್ಲೀವ್​ಲೆಸ್ ಟಾಪ್​ ಹಾಗ ಹೈವೇಯ್ಸ್ಟ್​ ಪ್ಯಾಂಟ್​ ಧರಿಸಿ, ಗುಲಾಬಿ ಬಣ್ಣದ ಬ್ಯಾಗ್​ ಹಿಡಿದು ಬಂದಿದ್ದಾರೆ. ಅವರು ಲಖನೌದ ಬಸ್ತಿಯಾ, ಗೋಸೈಗಂಜ್ ಬೂತ್ ಸಂಖ್ಯೆ 114ರಲ್ಲಿರುವ ಮತಗಟ್ಟೆಗೆ ಕರ್ತವ್ಯಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಸೆರೆಹಿಡಿಯಲಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ. 

ಈ ಸಂದರ್ಭ ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡಿದ ರೀನಾ ದ್ವಿವೇದಿ, ಈ ಬಾರಿ ಗರಿಷ್ಠ ಮತದಾನವಾಗುವ ನಿರೀಕ್ಷೆಯಲ್ಲಿದ್ದೇನೆ ಎಂದ ಅವರು, ತನ್​ ಲುಕ್ ಬಗ್ಗೆಯು ಪ್ರತಿಕ್ರಿಯಿಸಿ, 'ತಾನು ಫ್ಯಾಷನ್ ಟ್ರೆಂಡ್‌ಗಳನ್ನು ಅನುಸರಿಸುತ್ತೇನೆ. ಸಾರ್ವಕಾಲಿಕವಾಗಿ ಅಪ್​ಡೇಟ್​ ಆಗಲು ಬಯಸುತ್ತೇನೆ. ಹಾಗಾಗಿ ನನ್ನ ಗೆಟಪ್ ಕೂಡ ಬದಲಾಗಿದೆ ಎಂದು ಹೇಳಿದರು. 

ರೀನಾ ದ್ವಿವೇದಿ ತಮ್ಮ ಇನ್​ಸ್ಟಾಗ್ರಾಂನಲ್ಲಿ 2 ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಗಳನ್ನು ಹೊಂದಿದ್ದಾರೆ. ತಮ್ಮ ಜೀವನದಲ್ಲಿ ನಡೆಯುವ ವಿಶೇಷ ಕ್ಷಣಗಳು ಹಾಗೂ ಫೋಟೋಗಳನ್ನು ಆಗಾಗ ಅದರಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

Ads on article

Advertise in articles 1

advertising articles 2

Advertise under the article