ಮಿಸೆಸ್ ಸೌತ್ ಇಂಡಿಯಾಗೆ ಆಡಿಷನ್ ಸಿದ್ಧ: ಯುವತಿಯರಲ್ಲದೆ ಮಹಿಳೆಯರಿಗೂ ಅವಕಾಶ

ಬೆಂಗಳೂರು: ಯುವತಿಯರು ಹಾಗೂ ಮಹಿಳೆಯರಿಗೆ ಮಿಸೆಸ್​ ಸೌತ್ ಇಂಡಿಯಾ ಆಗುವ ಭಾರೀ ಅವಕಾಶವೊಂದು ತೆರೆದುಕೊಂಡಿದೆ. 

'ಮಿಸೆಸ್ ಸೌತ್ ಇಂಡಿಯಾ ಐ ಆ್ಯಮ್ ಪವರ್‌ಫುಲ್-2022' ಸ್ಪರ್ಧೆಯ ಆಡಿಷನ್‌ಗೆ ವೇದಿಕೆ ಇದೀಗ ಸಜ್ಜಾಗಿದೆ. ವಿಶೇಷವೆಂದರೆ ಈ ಆಡಿಷನ್ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿಯೇ ನಡೆಯಲಿದೆ. ಫೆ.18ರಂದು ಬೆಳಗ್ಗೆ 10ರಿಂದ ವೈಟ್​ಫೀಲ್ಡ್​ನಲ್ಲಿರುವ ಮ್ಯಾರಿಯಟ್ ಹೋಟೆಲ್​ನಲ್ಲಿ ಈ ಆಡಿಷನ್ ನಡೆಯಲಿದೆ. 

‘ಮಿಸೆಸ್ ಸೌತ್ ಇಂಡಿಯಾ ಐ ಆ್ಯಮ್ ಪವರ್‌ಫುಲ್-2022’ ಎಂಬ ಶೀರ್ಷಿಕೆಯುಳ್ಳ ಈ ಸೌಂದರ್ಯ ಸ್ಪರ್ಧೆಯನ್ನು ನಂದಿನಿ ನಾಗರಾಜ್​ ಎಂಬವರು ಆಯೋಜಿಸಿದ್ದಾರೆ. ಇದರಲ್ಲಿ ಯುವತಿಯರು ಮಾತ್ರವಲ್ಲದೆ ಮಹಿಳೆಯರಿಗೂ ಅವಕಾಶ ನೀಡಲಾಗಿದೆ. ಅಂದರೆ 18ರಿಂದ 55 ವರ್ಷದೊಳಗಿನ ಮಹಿಳೆಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. 

ಅವರಲ್ಲಿ ಐವತ್ತು ಮಂದಿಯನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. ಈ 50 ಮಂದಿಯಲ್ಲಿ ವಿಜೇತರಾದವರು 'ಮಿಸೆಸ್ ಸೌತ್ ಇಂಡಿಯಾ ಐ ಆ್ಯಮ್ ಪವರ್‌ಫುಲ್-2022'ರ ಮುಖ್ಯ ಸ್ಪರ್ಧೆಗೆ ಪ್ರವೇಶ ಪಡೆಯಲಿದ್ದಾರೆ. ಅಲ್ಲಿಯೂ ವಿಜೇತರಾದವರು ಸಿಂಗಾಪುರದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9901755163 ಕ್ಕೆ ಕರೆ ಮಾಡಬಹುದು.  
BREAKING NEWS
Loading latest news...
Join our WhatsApp Channel Powered By : Online Pudu