-->
ಸ್ನಾನಕ್ಕೆಂದು ಹೋದ ತಾಯಿ - ಮಗಳು ಉಸಿರುಕಟ್ಟಿ ಮೃತ್ಯು: ಬಚ್ಚಲು ಮನೆಯಲ್ಲಿ ಕಾದಿತ್ತು ದುರಂತ!

ಸ್ನಾನಕ್ಕೆಂದು ಹೋದ ತಾಯಿ - ಮಗಳು ಉಸಿರುಕಟ್ಟಿ ಮೃತ್ಯು: ಬಚ್ಚಲು ಮನೆಯಲ್ಲಿ ಕಾದಿತ್ತು ದುರಂತ!

ಬೆಂಗಳೂರು: ಸ್ನಾನಗೃಹಕ್ಕೆ ಸ್ನಾನ ಮಾಡಲೆಂದು ಹೋಗಿದ್ದ ತಾಯಿ-ಮಗಳು ಉಸಿರುಗಟ್ಟಿ ಮೃತಪಟ್ಟ ಹೃದಯವಿದ್ರಾವಕ ಘಟನೆಯೊಂದು ರಾಜಧಾನಿ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ನಡೆದ ಈ ದುರಂತದಲ್ಲಿ ತಾಯಿ ಮಂಗಳ (35) ಹಾಗೂ ಪುತ್ರಿ ಗೌತಮಿ (07) ಮೃತಪಟ್ಟಿದ್ದಾರೆ. 

ರಾಮನಗರ ಮೂಲದ ಇವರು ಕುಟುಂಬ ಸಮೇತರಾಗಿ 15 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು. ಇಂದು ಬೆಳಗ್ಗೆ ಮಂಗಳ ಅವರ ಪತಿ ನರಸಿಂಹಮೂರ್ತಿ ಕೆಲಸಕ್ಕೆಂದು ತೆರಳಿದ್ದರು. ಆ ಬಳಿಕ ಅವರು ಮಗಳನ್ನು ಕರೆದುಕೊಂಡು ಸ್ನಾನಕ್ಕೆಂದು ಬಚ್ಚಲಕೋಣೆಗೆ ಹೋಗಿದ್ದಾರೆ. ಅಲ್ಲಿ ಬಿಸಿನೀರಿಗಾಗಿ ಗ್ಯಾಸ್ ಗೀಸರ್ ಅನ್ನು ಆನ್ ಮಾಡಲಾಗಿತ್ತು. 

ಅಷ್ಟರಲ್ಲಾಗಲೇ ಗ್ಯಾಸ್ ಗೀಸರ್​ನಿಂದ ಅನಿಲ ಸೋರಿಕೆಯುಂಟಾಗಿದೆ. ಪರಿಣಾಮ ಉಸಿರುಗಟ್ಟಿ ತಾಯಿ-ಮಗಳು ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮನೆಯ ಮಾಲಕರ ಮನೆಯಾಕೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈ ಬಗ್ಗೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

Advertise under the article

  

  

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100