-->
ಭವಿಷ್ಯದ ಚಿಂತೆ: ಉದಯೋನ್ಮುಖ ಬ್ಯಾಡ್ಮಿಂಟನ್​ ಆಟಗಾರ್ತಿ ಆತ್ಮಹತ್ಯೆ

ಭವಿಷ್ಯದ ಚಿಂತೆ: ಉದಯೋನ್ಮುಖ ಬ್ಯಾಡ್ಮಿಂಟನ್​ ಆಟಗಾರ್ತಿ ಆತ್ಮಹತ್ಯೆ

ಆಂಧ್ರಪ್ರದೇಶ: ಉದಯೋನ್ಮುಖ ಬ್ಯಾಡ್ಮಿಂಟನ್​ ಆಟಗಾರ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. 

ಪೂರ್ವ ಗೋದಾವರಿ ಜಿಲ್ಲೆಯ ಜಿಎಂಸಿ ಬಾಲಯೋಗಿ ಕಾಲನಿ ನಿವಾಸಿ ಧರ್ಮರಾವ್​ರವರ ಪುತ್ರಿ ಆದಿಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಾಕೆ. 

ಆದಿಲಕ್ಷ್ಮಿ ಕಿರಿಯರ ವಿಭಾಗದ ಬ್ಯಾಡ್ಮಿಂಟನ್​ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು‌‌. ಈಕೆಯ ತಂದೆ ಮೀನು ವ್ಯಾಪಾರಿಯಾಗಿದ್ದರು. ಆದರೆ ಅವರು ಮನೆಯ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಇದರಿಂದ ಭವಿಷ್ಯದಲ್ಲಿ ಆರ್ಥಿಕ ತೊಂದರೆಯಾಗಬಹುದೆಂಬ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿರುವಳೆಂದು ತಿಳಿದು ಬಂದಿದೆ. 

2019 ಹಾಗೂ 2020ರಲ್ಲಿ ನಡೆದ ಜೂನಿಯರ್​ ನ್ಯಾಷನಲ್ಸ್​ ಬ್ಯಾಡ್ಮಿಂಟನ್​​ ಟೂರ್ನಿಯಲ್ಲಿ ಆದಿಲಕ್ಷ್ಮಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಆತ್ಮಹತ್ಯೆ ಮಾಡುವುದಕ್ಕೂ ಮೊದಲು ಸಹೋದರಿಗೆ ವಾಟ್ಸ್ಆ್ಯಪ್​ ಸಂದೇಶ ರವಾನೆ ಮಾಡಿ ''ನನಗೆ ಸಾಯುವುದಕ್ಕೆ ಇಷ್ಟವಿಲ್ಲ. ಆದರೆ, ನಮ್ಮ ಭವಿಷ್ಯವನ್ನು ಅಜ್ಜಿ ಚಿಂತೆಗೊಳಗಾಗಿದ್ದಾರೆ. ಅಪ್ಪ ಮನೆಯ ಯಾವುದೇ ವಿಚಾರದ ಬಗ್ಗೆಯೂ ತಲೆಕೆಡಿಸುತ್ತಿಲ್ಲ. ಸದ್ಯ ಅಜ್ಜಿಯ ಆರೋಗ್ಯ ಕೂಡ ಸರಿಯಿಲ್ಲ. ಭವಿಷ್ಯದಲ್ಲಿ ಏನಾಗುತ್ತದೆ ಎಂಬ ಭಯವಿದೆ. ಹೀಗಾಗಿ ಬದುಕಲು ಇಷ್ಟವಿಲ್ಲ. ಕ್ಷಮಿಸಿ, ಕುಟುಂಬದ ಸಂಪೂರ್ಣ ಜವಾಬ್ದಾರಿ ನೋಡಿಕೋ" ಎಂಬ ಸಂದೇಶ ರವಾನಿಸಿದ್ದಾಳೆ. 

ಹೀಗೆ ಡೆತ್ ನೋಟ್ ಬರೆದಿಟ್ಟ ಆದಿಲಕ್ಷ್ಮಿ ದೇವರಕೋಣೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಅಷ್ಟರಲ್ಲಿ ಆಕೆ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ‌.

Ads on article

Advertise in articles 1

advertising articles 2

Advertise under the article