-->

Mangaluru: ಪ್ರೀತಿ ನಿರಾಕರಣೆ ಮಾಡಿದ ಕಾಲೇಜು ಸಹಪಾಠಿಯಾಗಿದ್ದ ಯುವತಿಯನ್ನು ಅತ್ಯಾಚಾರಗೈದ ಕಾಮುಕ ಅರೆಸ್ಟ್!

Mangaluru: ಪ್ರೀತಿ ನಿರಾಕರಣೆ ಮಾಡಿದ ಕಾಲೇಜು ಸಹಪಾಠಿಯಾಗಿದ್ದ ಯುವತಿಯನ್ನು ಅತ್ಯಾಚಾರಗೈದ ಕಾಮುಕ ಅರೆಸ್ಟ್!

ಮಂಗಳೂರು: ಪ್ರೀತಿ ನಿರಾಕರಣೆ ಮಾಡಿರುವ ಕೋಪದಲ್ಲಿ ಕಾಲೇಜಿನಲ್ಲಿ ಸಹಪಾಠಿಯಾಗಿದ್ದಾಕೆಯನ್ನೇ ಬಲವಂತವಾಗಿ ಅತ್ಯಾಚಾರ ಮಾಡಿದ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. 

ಅಬೂಬಕರ್ ಸಿದ್ದಿಕ್ (21) ಬಂಧಿತ ಆರೋಪಿ.

ಸಂತ್ರಸ್ತೆ ಹಾಗೂ ಅಬೂಬಕರ್ ಸಿದ್ದಿಕ್ ಈ ಹಿಂದೆ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದವರು. 2019ರಲ್ಲಿ ಕಾಲೇಜಿನಲ್ಲಿ ನಡೆದಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಇಬ್ಬರು ಜೊತೆಯಾಗಿ ನಿಂತು ಫೋಟೋವನ್ನು ತೆಗೆಸಿಕೊಂಡಿದ್ದರು. ಆ ಬಳಿಕ ಆರೋಪಿ ಆ  ಫೋಟೋವನ್ನು ತೋರಿಸಿ ಯುವತಿಯನ್ನು ಪ್ರೀತಿಸುವಂತೆ ಪೀಡಿಸಲು ತೊಡಗಿದ್ದಾನೆ. ಆಕೆ ಪ್ರೀತಿ ಮಾಡಲು ನಿರಾಕರಣೆ ಮಾಡಿದಾಗ ಇಬ್ಬರೂ ಜೊತೆಯಾಗಿದ್ದ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದಾನೆ.

ಆದರೂ ಆಕೆ ಪ್ರೀತಿಸಲು ನಿರಾಕರಣೆ ಮಾಡಿದ್ದಳು. ಈ ಹಿನ್ನೆಲೆಯಲ್ಲಿ ಡಿ.8 ರಂದು ಯುವತಿ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭ ಹಿಂಬಾಲಿಸಿಕೊಂಡು ಬಂದು ಆರೋಪಿ ಅಬೂಬಕರ್ ಸಿದ್ದೀಕ್,  ಮನೆಗೆ ನುಗ್ಗಿ ಆಕೆಯ ಮೇಲೆ ಆತ್ಯಾಚಾರವೆಸಗಿದ್ದಾನೆ.

ಈ ಬಗ್ಗೆ ಸಂತ್ರಸ್ತೆ ಬಜ್ಪೆ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article