-->
ನಟಿಯ ತಿರುಚಿದ ಅಶ್ಲೀಲ ಭಾವಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್: ದೂರಿನ ಬೆನ್ನಲ್ಲೇ ಆರೋಪಿಗಳು ಅರೆಸ್ಟ್

ನಟಿಯ ತಿರುಚಿದ ಅಶ್ಲೀಲ ಭಾವಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್: ದೂರಿನ ಬೆನ್ನಲ್ಲೇ ಆರೋಪಿಗಳು ಅರೆಸ್ಟ್

ತಿರುವನಂತಪುರಂ: ಕೇರಳದ ನಟಿ ಪ್ರವೀಣಾ ಭಾವಚಿತ್ರವನ್ನು ತಿರುಚಿ ಅಶ್ಲೀಲವಾಗಿ‌ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯನ್ನು ಭಾಗ್ಯರಾಜ್​ (22) ಎಂದು ಗುರುತಿಸಲಾಗಿದ್ದು, ಈತನನ್ನು ನವದೆಹಲಿಯಲ್ಲಿ ಬಂಧಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಮದೆ ತಮಿಳುನಾಡಿನ ಕನ್ಯಾಕುಮಾರಿ ಮೂಲದ ಮಣಿಕಂದನ್​ ಶಂಕರ್​ ಎಂಬಾತನ್ನು ಬಂಧಿಸಲಾಗಿತ್ತು. ಆರೋಪಿಗಳು ನಟಿ ಪ್ರವೀಣಾ ಹೆಸರಿನಲ್ಲಿ ನಕಲಿ ಖಾತೆ ತೆರೆದು ಎಡಿಟ್​ ಮಾಡಲಾಗಿರುವ ಅಶ್ಲೀಲ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿದ್ದರು. ಪ್ರವೀಣಾ ಸಾಮಾಜಿಕ ಜಾಲತಾಣ ವೀಕ್ಷಣೆ ಮಾಡುವ ಸಂದರ್ಭದಲ್ಲಿ ತಮ್ಮ ಅಶ್ಲೀಲ ಫೋಟೋಗಳನ್ನು ನೋಡಿ ಶಾಕ್​ ಆಗಿದ್ದರು. ಈ ಸಂಬಂಧ ನಟಿ ಪ್ರವೀಣಾ ದೂರು ದಾಖಲಿಸಿದ್ದರು. 

ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ಕೇರಳ ಎಡಿಜಿಪಿ ಮನೋಜ್​ ಅಬ್ರಾಹಂ ನಿರ್ದೇಶನದ ಮೇರೆಗೆ ತಿರುವನಂತಪುರಂ ನಗರ ಪೊಲೀಸ್​ ಆಯುಕ್ತ ಬಲರಾಮ್​ ಉಪಾಧ್ಯಾಯ್​ ನೇತೃತ್ವದಲ್ಲಿ ತನಿಖೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ ಭಾಗ್ಯರಾಜ್ ನನ್ನು ದೆಹಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. 

ಇದೀಗ ಇಬ್ಬರು ಆರೋಪಿಗಳ ಬಂಧನವಾಗಿದ್ದು, ನಟಿ ಪ್ರವೀಣಾ ಸಂತಸ ವ್ಯಕ್ತಪಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article