ತಂದೆಯೇ ಅಪ್ರಾಪ್ತ ಪುತ್ರಿಗೆ ಬೀಡಿ ಸೇದಲು ಪ್ರಚೋದಿಸಿ ವೀಡಿಯೋ ಚಿತ್ರೀಕರಿಸಿ ವೈರಲ್: ಆರೋಪಿ ವಿರುದ್ಧ ಕ್ರಮಕ್ಕೆ ನೆಟ್ಟಿಗರಿಂದ ಆಗ್ರಹ

                            ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು: ತಂದೆಯೇ ಅಪ್ರಾಪ್ತ ಪುತ್ರಿಗೆ ಬೀಡಿ ಸೇದಲು ಪ್ರಚೋದನೆ ಮಾಡಿ ಅದರ ವೀಡಿಯೋ ಚಿತ್ರೀಕರಣ ‌ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ಘಟನೆ ಗುರುವಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಇದೀಗ ವೈರಲ್ ಆಗಿರುವ ಈ ವೀಡಿಯೋವನ್ನು ನೋಡಿರುವ ನೆಟ್ಟಿಗರು ವ್ಯಕ್ತಿಯ ಕೃತ್ಯವನ್ನು ಖಂಡಿಸಿ ಆತನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮ ಸಮೀಪದ ಜಾಣಿಗಿ ಎಂಬಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ತಕ್ಷಣ ಕೃತ್ಯ ಎಸಗಿರುವ ಬಾಲಕಿಯ ತಂದೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. 

ಬೆಳೆಯುವ ಮಕ್ಕಳ ಮುಂದೆ ಧೂಮಪಾನ, ಮದ್ಯಪಾನವನ್ನು ಮಾಡುವುದೇ ತಪ್ಪು. ಅದರ ಮೇಲೆ ಈ ವ್ಯಕ್ತಿಯು ಹೆತ್ತ ಮಗಳ ಕೈಗೆ ಬೀಡಿ ನೀಡಿ, ಆಕೆ ಬೀಡಿ ಸೇದುತ್ತಿರುವುದನ್ನು ವೀಡಿಯೋ ಚಿತ್ರೀಕರಿಸಿದ್ದಲ್ಲದೇ ಮೂಗಿನಿಂದ ಹೊಗೆ ಬಿಡುವಂತೆ ಪ್ರಚೋದಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. 

ಈ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಆರೋಪಿ‌ ತಂದೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಆತನ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹವೂ ಕೇಳಿ ಬರುತ್ತಿದೆ.
BREAKING NEWS
Loading latest news...
Join our WhatsApp Channel Powered By : Online Pudu