ಓರಿಯೊ ಬಿಸ್ಕೆಟ್ ನಲ್ಲಿ ಪಕೋಡ ಮಾಡಿ ಮಾರಾಟ ವ್ಯಾಪಾರಿ: ವೈರಲ್ ಆಗುತ್ತಿದೆ ವೀಡಿಯೋ

ಅಹಮದಾಬಾದ್: ಹಿಂದೆ ಓರಿಯೊ ಮ್ಯಾಗಿಯ ವೀಡಿಯೋವೊಂದು ವೈರಲ್ ಆಗಿರುವುದು ಹೆಚ್ಚಿನವರಿಗೆ ತಿಳಿದೇ ಇದೆ. ಇದೀಗ ಅದೇ ರೀತಿಯ ವಿಲಕ್ಷಣವಾದ ತಿಂಡಿಯ ಕಾಂಬಿನೇಶನ್ನೊಂದು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. 

ವ್ಯಕ್ತಿಯೋರ್ವರು ಓರಿಯೊ ಪಕೋಡಾ ತಯಾರಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈ ವೀಡಿಯೋವನ್ನು ಫೂಡೀ ಇನ್ಕಾರ್ನೇಟ್ ಎಂಬ ಹೆಸರಿನ ಯೂಟ್ಯೂಬ್‌ ಚಾನೆಲ್  ಅಪ್‌ಲೋಡ್ ಮಾಡಿಲಾಗಿದೆ. ಈ ವೀಡಿಯೋವನ್ನು ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬ್ಲಾಗರ್ ಅಮರ್ ಸಿರೋಹಿಯವರು 'ನಮಗೆ ಈ ಆಹಾರದ ಬಗ್ಗೆ ತಿಳಿದು ವಿಚಿತ್ರ ಅನ್ನಿಸಬಹುದು. ಆದರೆ ಇದು ಇತ್ತೀಚಿನ ತಿಂಡಿಯಲ್ಲ. ಕಳೆದ 15-20 ವರ್ಷಗಳಿಂದ ವಿಶೇಷವಾಗಿ ಯುವ ಜನತೆಯ ವಲಯದಲ್ಲಿ ಪ್ರಖ್ಯಾತಿ ಹೊಂದಿದೆ ಎಂದು ಹೇಳುತ್ತಾರೆ.

ಈ ವಿಶೇಷ ಕಾಂಬಿನ್ನೇಶನ್ ತಿಂಡಿಯನ್ನು ತಯಾರಿಸಲು ಬೀದಿ ಬದಿ ಸ್ಟಾಲ್ ನ ವ್ಯಾಪಾರಿಯು ಕಡಲೆ ಹಿಟ್ಟಿಗೆ ಉಪ್ಪು ಹಾಗೂ ನೀರು  ಮಿಶ್ರಮಾಡಿ ದಪ್ಪವಾದ ಹಿಟ್ಟನ್ನು ಕದಡಿ ಸಿದ್ಧಪಡಿಸಿದರು. ಅದಕ್ಕೆ ಓರಿಯೊಸ್ ಪ್ಯಾಕೆಟ್ ಅನ್ನು ಹಾಕಿದರು. ಓರಿಯೋ ಬಿಸ್ಕತ್ತುಗಳಿಗೆ ಕಡಲೆ ಹಿಟ್ಟನ್ನು ಎರಡೂ ಕಡೆಗಳಿಗೆ ಲೇಪಿಸಿದರು. ಬಳಿಕ ಅವುಗಳನ್ನು ಬಿಸಿ ಎಣ್ಣೆಯಲ್ಲಿ ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿದಿದ್ದಾರೆ.

ಆನಂತರ ವ್ಯಾಪಾರಿ ಓರಿಯೊ ಪಕೋಡಾವನ್ನು ಕರಿದ ಹಸಿರು ಮೆಣಸಿನಕಾಯಿಗಳು ಮತ್ತು ವಿಶೇಷ ಖರ್ಜೂರದ ಚಟ್ನಿಯೊಂದಿಗೆ ತಿನ್ನಲು ನೀಡುತ್ತಾರೆ. ಈ ಓರಿಯೋ ಪಕೋಡದ ಬೆಲೆ 100 ಗ್ರಾಂಗೆ ಕೇವಲ 20 ರೂ. ಅಂತೆ.
BREAKING NEWS
Loading latest news...
Join our WhatsApp Channel Powered By : Online Pudu