ಪತಿಯನ್ನು ಕೊಲೆಗೈದು ಹೂತಿಟ್ಟ ಪತ್ನಿ: ಮೊಬೈಲ್ ಸ್ವಿಚ್ ಮಾಡಿ ಪರಾರಿ

ಬೆಂಗಳೂರು: ಪತಿಯನ್ನು ಕೊಲೆಗೈದು ಪತ್ನಿಯೋರ್ವಳು ಗುಂಡಿ ತೋಡಿ ಮೃತದೇಹವನ್ನು ಹೂತಿಟ್ಟು ಪರಾರಿಯಾಗಿರುವ ಘಟನೆ ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿ ನಡೆದಿದೆ. ನಗರದ ಕಿತ್ತಗನೂರು ಸಮೀಪದ ಹಳೇಹಳ್ಳಿಯಲ್ಲಿ ಈ ಹತ್ಯೆ ನಡೆದಿದೆ. 

ಪ್ರೇಮ್ ಬದ್ವಾಲ್ ಎಂಬಾತ ಕೊಲೆಗೀಡಾದ ಪತಿ. ಪತ್ನಿ ಶೋಭಾ ಬದ್ವಾಲ್​ ಕೊಲೆ ಆರೋಪಿ. ಪತಿ - ಪತ್ನಿ ಇಬ್ಬರೂ ನೇಪಾಳ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ. 

ಪತ್ನಿ ಶೋಭಾ ಬದ್ವಾಲ್ ಪತಿಯನ್ನು ಕೊಲೆಗೈದು ಗುಂಡಿ ತೋಡಿ ಮುಚ್ಚಿದ್ದಾಳೆ. ಬಳಿಕ ತನ್ನ ಮೊಬೈಲ್​ಫೋನ್​ ಅನ್ನು ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾಳೆ. ಕಳೆದ ವಾರವೇ ಆಕೆ ಕೊಲೆಗೈದಿದ್ದಾಳೆಂದು ಶಂಕಿಸಲಾಗಿದೆ. ಮೊನ್ನೆ ರಾತ್ರಿ ಕೆಟ್ಟ ವಾಸನೆ ಬರುತ್ತಿದ್ದಂತೆ ಸ್ಥಳೀಯರು ಆವಲಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾ್ ಮೃತದೇಹ ಪತ್ತೆಯಾಗಿದೆ. 

ಪತಿ-ಪತ್ನಿ ಮಧ್ಯೆ ಯಾವುದೋ ವಿಚಾರಕ್ಕೆ ವಿರಸ ಉಂಟಾಗಿ ಬಳಿಕ ಆಕೆ ಪತಿಯನ್ನು ಹತ್ಯೆ ಮಾಡಿ ಹೂತು ಹಾಕಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿತೆ ಪತ್ನಿಯ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ. 
BREAKING NEWS
Loading latest news...
Join our WhatsApp Channel Powered By : Online Pudu