Mangaluru: ಸ್ನೇಹಿತನ ತಂಗಿಗೇ 'ಮತ್ತು ಬರುವ ಜ್ಯೂಸ್' ನೀಡಿ ಅತ್ಯಾಚಾರಗೈದ ರೌಡಿ ಶೀಟರ್ ಅ‌ಂದರ್; ಪೊಕ್ಸೊ ಪ್ರಕರಣ ದಾಖಲು

ಮಂಗಳೂರು: ಸ್ನೇಹಿತನ ತಂಗಿಯಾದ ಅಪ್ರಾಪ್ತ ಬಾಲಕಿಗೆ ಮತ್ತು ಬರುವ ಜ್ಯೂಸ್ ನೀಡಿ ಅತ್ಯಾಚಾರ ಎಸಗಿದ್ದಾನೆಂದು ಆರೋಪಿಸಿ ರೌಡಿ ಶೀಟರ್ ಓರ್ವನನ್ನು ನಗರದ ಪಾಂಡೇಶ್ವರ ಮಹಿಳಾ ಪೊಲೀಸರು ಬಂಧಿಸಿದ್ದು, ಪೊಕ್ಸೊ ಪ್ರಕರಣ ದಾಖಲಿಸಿದ್ದಾರೆ.

ಕಂಕನಾಡಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಪ್ರದೇಶದ ಸಂತ್ರಸ್ತ ಬಾಲಕಿಯ ಮನೆಯಲ್ಲಿ ಈ ಘಟನೆ  ನಡೆದಿದೆ. ಹಳೆಯ ರೌಡಿಶೀಟರ್ ನವೀನ್ ಸಿಕ್ವೇರ(34) ಎಂಬಾತ ಬಂಧನಕ್ಕೊಳಗಾದ ಆರೋಪಿ.

ಆರೋಪಿ ನವೀನ್ ಸಿಕ್ವೇರನಿಗೆ ಸಂತ್ರಸ್ತ ಬಾಲಕಿಯ ಸಹೋದರನೊಂದಿಗೆ ಸ್ನೇಹವಿತ್ತು. ಈ ಸ್ನೇಹದ ಹಿನ್ನೆಲೆಯಲ್ಲಿ ಆರೋಪಿ ನವೀನ್ ಸಿಕ್ವೆರ ಆತನ ಮನೆಗೆ ಬರುತ್ತಿದ್ದ. ಇತ್ತೀಚೆಗೆ ಆತ ಗೆಳೆಯನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಂದಿದ್ದಾನೆ. ಆಗ ಸಂತ್ರಸ್ತ ಬಾಲಕಿ ಮನೆಯಲ್ಲಿ ಓರ್ವಳೇ ಇದ್ದು, ಈ ಸಂದರ್ಭ ಆಕೆಗೆ ಆರೋಪಿಯು ಜ್ಯೂಸ್‌ನಲ್ಲಿ ಮತ್ತು ಬರುವ ಪದಾರ್ಥ ಹಾಕಿ ನೀಡಿದ್ದಾನೆ. ಅದನ್ನು ಕುಡಿದ ಅಪ್ರಾಪ್ತ ಬಾಲಕಿ ಪ್ರಜ್ಞೆ ತಪ್ಪಿದ್ದಾಳೆ. ಈ ಸಂದರ್ಭ ಆರೋಪಿ ಬಾಲಕಿಯ ಮೇಲೆ  ಅತ್ಯಾಚಾರವೆಸಗಿದ್ದಾನೆಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ. 

ಈ ಬಗ್ಗೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿದೆ.

BREAKING NEWS
Loading latest news...
Join our WhatsApp Channel Powered By : Online Pudu