-->
Mangalore ವಿಧಾನಪರಿಷತ್  ಚುನಾವಣೆ:  ಕಣದಲ್ಲಿ ಅಂತಿಮವಾಗಿ ಮೂವರು ಅಭ್ಯರ್ಥಿಗಳು

Mangalore ವಿಧಾನಪರಿಷತ್ ಚುನಾವಣೆ: ಕಣದಲ್ಲಿ ಅಂತಿಮವಾಗಿ ಮೂವರು ಅಭ್ಯರ್ಥಿಗಳುಮಂಗಳೂರು :ಕರ್ನಾಟಕ ವಿಧಾನ ಪರಿಷತ್ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಮತಕ್ಷೇತ್ರದ ಚುನಾವಣೆಗೆ ಸ್ಪರ್ಧೆ ಬಯಸಿ ಉಮೇದುವಾರಿಕೆ ಸಲ್ಲಿಸಿದ್ದ 7 ಮಂದಿ ಅಭ್ಯರ್ಥಿಗಳಲ್ಲಿ ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ನ.26ರ ಶುಕ್ರವಾರ ನಾಲ್ವರು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದಿದ್ದಾರೆ.


         ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ನಿತಿನ್ ಕುಮಾರ್, ಕೌಶಿಕ್ ಡಿ ಶೆಟ್ಟಿ, ನವೀನ್ ಕುಮಾರ್ ರೈ ಹಾಗೂ ಶಶಿಧರ್ ಎಂ. ಅವರು ಉಮೇದುವಾರಿಕೆ ಹಿಂಪಡೆದುಕೊಂಡಿದ್ದಾರೆ.


         ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಂಜುನಾಥ ಭಂಡಾರಿ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಅಭ್ಯರ್ಥಿ ಶಾಫಿ ಕೆ. ಚುನಾವಣಾ ಕಣದಲ್ಲಿ ಉಳಿದಿದ್ದಾರೆ. 

ಡಿಸೆಂಬರ್ 10ರಂದು ಈ ಚುನಾವಣೆಗೆ ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಅಗಿರುವ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article

holige copy 1.jpg