ಚಿನ್ನದ ಹುಡುಗನಿಗೆ ವಿಶೇಷ ವಿನ್ಯಾಸದ ಬಂಗಾರದ ಲೇಪನದ ಕಾರು ಉಡುಗೊರೆ ನೀಡಿದ 'ಮಹೀಂದ್ರಾ'

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬಂಗಾರದ ಪದಕ ಗೆದ್ದು ಭಾರತದ ಕೀರ್ತಿಯನ್ನು ಬಾನೆತ್ತರಕ್ಕೆ ಹಾಕಿಸಿರುವ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾಗೆ ಮಹೀಂದ್ರಾ ಕಂಪಿನಿಯ ಮಾಲಕ ಆನಂದ್ ಮಹೀಂದ್ರಾ ಭಾರಿ ಉಡುಗೊರೆ ನೀಡಿದ್ದಾರೆ. 

ಅವರು ನೀರಜ್ ಚೋಪ್ರಾಗೆ XUV 700 ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ನೀರಜ್ ಚೋಪ್ರಾ 87.58 ಮೀ. ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ದಾಖಲೆ ನಿರ್ಮಿಸಿದ್ದರು. ಈ ಮೂಲಕ ನೀರಜ್‌ ಚಿನ್ನದ ಪದಕದೊಂದಿಗೆ ಸಾಧನೆ ಮಾಡಿದ್ದರು. ನೀರಜ್ ಚೋಪ್ರಾ ಸಾಧನೆ ಗುರುತಿಸಿರುವ ಆನಂದ್ ಮಹೀಂದ್ರಾ ಅವರು ಕಾರು ಉಡುಗೊರೆಯಾಗಿ ನೀಡಿರುವುದಾಗಿ ಈ ಹಿಂದೆಯೇ ಘೋಷಿಸಿದ್ದರು.

ಮಹೀಂದ್ರಾ ಉಡುಗೊರೆಯಾಗಿ ನೀಡಲೆಂದೇ ವಿಶೇಷ ವಿನ್ಯಾಸ ಮಾಡಿರುವ ಕಾರನ್ನು ಸಿದ್ಧಪಡಿಸಲಾಗಿದೆ. ಕಾರನ್ನು ಉಡುಗೊರೆಯಾಗಿ ಪಡೆದಿರುವ ನೀರಜ್‌ ತುಂಬಾ ಸಂತೋಷಗೊಂಡಿದ್ದು, ಮಹೀಂದ್ರಾ ಕಂಪೆನಿಗೆ ಧನ್ಯವಾದ ತಿಳಿಸಿದ್ದಾರೆ. 'ನನಗಾಗಿಯೇ ಇಷ್ಟೆಲ್ಲಾ ವಿನ್ಯಾಸ ಮಾಡಿರುವುದು ಅತೀವ ಸಂತೋಷವಾಗಿದೆ' ಎಂದಿದ್ದಾರೆ. 

ಅಂದಹಾಗೆ ಈ ಕಾರು ಕಪ್ಪು ಬಣ್ಣದ್ದಾಗಿದ್ದು, ಸ್ಯಾಟಿನ್ ಚಿನ್ನದ ಲೇಪನವನ್ನೂ ಹೊಂದಿದೆ. ಅಲ್ಲದೆ ಕಾರಿಗೆ ಹೊಸ ಮಹೀಂದ್ರಾ ಲೋಗೋವನ್ನು ಬಳಸಲಾಗಿದೆ. 
BREAKING NEWS
Loading latest news...
Join our WhatsApp Channel Powered By : Online Pudu