-->

ಕ್ರಿಕೆಟಿಗ ಕೆ.ಎಲ್.ರಾಹುಲ್ ಹಾಗೂ ನಟಿ ಆಥಿಯಾ ಶೆಟ್ಟಿ ನಡುವಣ ಸಂಬಂಧ ಕನ್ಫಾರ್ಮ್

ಕ್ರಿಕೆಟಿಗ ಕೆ.ಎಲ್.ರಾಹುಲ್ ಹಾಗೂ ನಟಿ ಆಥಿಯಾ ಶೆಟ್ಟಿ ನಡುವಣ ಸಂಬಂಧ ಕನ್ಫಾರ್ಮ್

ಮುಂಬೈ: ಭಾರತ ಕ್ರಿಕೆಟ್​ ತಂಡದ ಬ್ಯಾಟ್ಸ್​ಮನ್​, ಕನ್ನಡಿಗ ಕೆ.ಎಲ್​.ರಾಹುಲ್​ ಹಾಗೂ ಬಾಲಿವುಡ್​ ನಟ ಸುನಿಲ್ ಶೆಟ್ಟಿ ಪುತ್ರಿ, ನಟಿ ಆಥಿಯಾ ಶೆಟ್ಟಿ ನಡುವೆ ಡೇಟಿಂಗ್ ನಡೆಯುತ್ತಿದೆ ಎಂದು ಹರಿದಾಡುತ್ತಿದ್ದ ಗಾಸಿಪ್​ಗೆ ಕೆ.ಎಲ್.ರಾಹುಲ್​ ಇಂದು ಇತಿಶ್ರೀ ಹಾಡಿದ್ದಾರೆ.


ತಮ್ಮಿಬ್ಬರ ನಡುವೆ ಯಾವುದೇ ಸಂಬಂಧವಿಲ್ಲ ಎನ್ನುತ್ತಿದ್ದ ಈ ಜೋಡಿ ಇದೀಗ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ. ನಟಿ ಆಥಿಯಾ ಶೆಟ್ಟಿ ಬರ್ತ್ ಡೇ ಹಿನ್ನೆಲೆಯಲ್ಲಿ ಕೆ.ಎಲ್​.ರಾಹುಲ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಆಥಿಯಾ ಶೆಟ್ಟಿ ಜೊತೆಗಿರುವ ಎರಡು ಫೋಟೋಗಳನ್ನು ಪೋಸ್ಟ್​ ಮಾಡಿ 'ನನ್ನ ಪ್ರೀತಿಯ ಆಥಿಯಾ ಶೆಟ್ಟಿಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ. ಇದು ಅವರಿಬ್ಬರ ನಡುವೆಯಿದ್ದ ಗಾಸಿಪ್​ ಅನ್ನು ಅಧಿಕೃತಗೊಳಿಸಿದೆ. 

ಕೆ.ಎಲ್.ರಾಹುಲ್​ರವರ ಈ ಪೋಸ್ಟ್​ಗೆ ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳು ಕಾಮೆಂಟ್​ ಮಾಡಿದ್ದಾರೆ. ಆಥಿಯಾ ಶೆಟ್ಟಿಯವರ ತಂದೆ ಸುನಿಲ್​ ಶೆಟ್ಟಿ, ಸಹೋದರ ಅಹನ್​ ಶೆಟ್ಟಿ, ನಟಿ ಅನುಷ್ಕಾ ಶರ್ಮಾ, ಸೈಯಾಮಿ ಖೇರ್​, ಸಾನಿಯಾ ಮಿರ್ಜಾ ಹಾರ್ಟ್​ ಸಿಂಬಲ್​ ಇಮೋಜಿಯನ್ನು ಹಾಕಿದ್ದಾರೆ.


ಕುತೂಹಲಕಾರಿ ಸಂಗತಿಯೆಂದರೆ, ಆಥಿಯಾ ಶೆಟ್ಟಿ ಕೂಡ ಸ್ಕಾಟ್ಲೆಂಡ್​ ವಿರುದ್ಧ ನಡೆದಿರುವ ಪಂದ್ಯವನ್ನು ಕ್ರೀಡಾಂಗಣದಲ್ಲಿ ಕುಳಿತು ವೀಕ್ಷಿಸಿದ್ದಾರೆ. ಕೆ.ಎಲ್​. ರಾಹುಲ್​ ಅಬ್ಬರದ ಅರ್ಧಶತಕ ಸಿಡಿಸುತ್ತುದ್ದಂತೆ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೇಹ್ ಜೊತೆಗೆ ಕುಳಿತು ಚಪ್ಪಾಳೆ ತಟ್ಟಿ ಹುರಿದುಂಬಿಸಿದ್ದಾರೆ. ಇಂಗ್ಲೆಂಡ್​ನಲ್ಲಿ ನಡೆದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪ್ರವಾಸಕ್ಕೂ ಮುನ್ನ ಆಥಿಯಾ ಶೆಟ್ಟಿ ಅವರನ್ನು ತಮ್ಮ ಪಾರ್ಟ್ನರ್​ ಎಂದು ಕೆ.ಎಲ್.ರಾಹುಲ್ ಅವರು ನಮೂದಿಸಿ ಬಿಸಿಸಿಐಗೆ ಮಾಹಿತಿ ನೀಡಿದ್ದರು ಎಂದು ಪತ್ರಿಕೆಯೊಂದು ವರದಿ ಮಾಡಿತ್ತು.

Ads on article

Advertise in articles 1

advertising articles 2

Advertise under the article