ಈ ಅಮಾನವೀಯ ಘಟನೆ ನಡೆದದ್ದು ಬೇರೆ ಕಡೆ ಅಲ್ಲ- ಬುದ್ದಿವಂತರ ಜಿಲ್ಲೆ ದಕ್ಷಿಣ ಕನ್ನಡದಲ್ಲಿ- ಅಡಿಕೆ ಕದ್ದನೆಂದು ಬಾಲಕನಿಗೆ ಹಿಗ್ಗಾಮುಗ್ಗ ಥಳಿಸಿದರು! (VIDEO)

ಮಂಗಳೂರು:  ಬುದ್ದಿವಂತರ ಜಿಲ್ಲೆ ಎಂದು ಕರೆಯಲ್ಪಡುವ ದಕ್ಷಿಣ ಕನ್ನಡದಲ್ಲಿ ಅಡಿಕೆ ಕದ್ದನೆಂದು ಬಾಲಕನೊಬ್ಬನಿಗೆ ಗುಂಪೊಂದು ಹಿಗ್ಗಾಮುಗ್ಗ ಥಳಿಸಿದ ಘಟನೆ ನಡೆದಿದೆ.

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ 16 ವರ್ಷದ ಬಾಲಕ ಹಲ್ಲೆಗೊಳಗಾದವನು.  ಈ ಬಾಲಕ ತಾನು ಲೀಸಿಗೆ ಅಡಿಕೆ ತೋಟವೊಂದನ್ನು ತೆದುಕೊಂಡಿದ್ದನು. ಇದರಲ್ಲಿ ಸಿಕ್ಕ ಸುಮಾರು 25 ಕೆ ಜಿ ಅಡಿಕೆಯನ್ನು  ಮಾರಲೆಂದು ಗುತ್ತಿಗಾರ್ ಪೇಟೆಗೆ ತೆಗೆದುಕೊಂಡು ಹೋಗುವ ವೇಳೆ ತಂಡವೊಂದು ಅಡ್ಡಗಟ್ಟಿದೆ. 

ಈ ತಂಡ ಬಾಲಕನ ಪರಿಚಿತರೆ ಆಗಿರುವ ಜೀವನ್, ವರ್ಷಿತ್, ಸಚಿನ್, ಮೋಕ್ಷಿತ್, ಸನತ್, ಮುರಳಿ, ಈಶ್ವರ್ ಚಂದ್ರ, ಚೇತನ್ ಮತ್ತು ದಿನೇಶ್ ಎಂಬವರಾಗಿದ್ದರು.  




ಇವರು ಬಾಲಕನನ್ನು ಅಡ್ಡಗಟ್ಟಿ ಆತನ ಬಳಿ ಇರುವ ಅಡಿಕೆಯನ್ನು ಈಶ್ವರ ಎಂಬವರ ತೋಟದಿಂದ ಕದ್ದದ್ದು ಎಂದು ಆಪಾದಿಸಿ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದಾರೆ. ಬಾಲಕ ಇದು ಕದ್ದ ಅಡಿಕೆಯಲ್ಲ, ನಮ್ಮ ತೋಟದ ಅಡಿಕೆ ಎಂದು ಹೇಳಿದರೂ  ಹಿಗ್ಗಾಮುದ್ದ ಥಳಿಸಿದ್ದಾರೆ.

ಅಷ್ಟು ಮಾತ್ರವಲ್ಲದೆ ಹಲ್ಲೆ ನಡೆಸಿರುವ ಬಗ್ಗೆ ದೂರು ನೀಡಿದರೆ ಜೀವಸಹಿತ ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.  ಗಾಯಗೊಂಡ ಬಾಲಕ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ  ದೂರು ನೀಡಿದ್ದಾರೆ