ಮೂಡಬಿದಿರೆ ಸಿಡಿಲಿನ ಆರ್ಭಟಕ್ಕೆ ಇಬ್ಬರು ಸ್ಥಳದಲ್ಲೆ ಸಾವು- ದ.ಕ ಜಿಲ್ಲೆಯಲ್ಲಿ ನಾಲ್ಕು ದಿನದಲ್ಲಿ ನಾಲ್ವರ ಸಾವು


ಮೂಡುಬಿದಿರೆ: ಮೂಡಬಿದಿರೆಯ ಪುತ್ತಿಗೆ ಪಂ. ವ್ಯಾಪ್ತಿಯ ಕಂಚಿಬೈಲು ಅರ್ಬಿ ಪ್ರದೇಶದಲ್ಲಿ ಸೋಮವಾರ ಸಂಜೆ ಸಿಡಿಲಿನ ಆರ್ಭಟಕ್ಕೆ ಇಬ್ಬರು ಬಲಿಯಾಗಿದ್ದಾರೆ.


ಯಶವಂತ , ಮಣಿಪ್ರಸಾದ ಎಂಬ ಇಬ್ಬರು ಸಿಡಿಲಿನ ಅಬ್ಬರಕ್ಕೆ‌ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.ಇವರು ಅರ್ಬಿ ಪ್ರದೇಶದಲ್ಲಿ ಶೆಡ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾಗಿದ್ದಾರೆ.

 ಇವರ ಜೊತೆಗಿದ್ದ ಗಣೇಶ, ಸಂದೀಪ ಮತ್ತು ಪ್ರವೀಣ ಎಂಬವರಿಗೂ ಸಿಡಿಲಿನ ಅಬ್ಬರಕ್ಕೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.


ಶುಕ್ರವಾರ ದ ಬಳಿಕ ನಾಲ್ವರ ಸಾವು

ಸಿಡಿಲಿನ ಅಬ್ಬರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರದಿಂದ ನಾಲ್ವರು ಸಾವನ್ನಪ್ಪಿದ್ದಾರೆ. ಶುಕ್ರವಾರದಂದು ಪುತ್ತೂರು ತಾಲೂಕಿನ ಓರ್ವರು, ಶನಿ ವಾರದಂದು ಉಳ್ಳಾಲದ ಓರ್ವರು, ಇಂದು ಮೂಡಬಿದಿರೆಯ ಇಬ್ಬರು ಸಾವನ್ನಪ್ಪಿದ್ದಾರೆ.
 
BREAKING NEWS
Loading latest news...
Join our WhatsApp Channel Powered By : Online Pudu