-->
ಪ್ರೀತಿಸಿ ಮದುವೆಯಾಗಿ 9 ವರ್ಷಗಳ ಬಳಿಕ ಪತ್ನಿಯ ಜಾತಿ ನೆಪವೊಡ್ಡಿ 2ನೇ ಮದುವೆಗೆ ಅಣಿಯಾದ ಭೂಪ: ಠಾಣೆಯ ಮೆಟ್ಟಿಲೇರಿದ ಪತ್ನಿ

ಪ್ರೀತಿಸಿ ಮದುವೆಯಾಗಿ 9 ವರ್ಷಗಳ ಬಳಿಕ ಪತ್ನಿಯ ಜಾತಿ ನೆಪವೊಡ್ಡಿ 2ನೇ ಮದುವೆಗೆ ಅಣಿಯಾದ ಭೂಪ: ಠಾಣೆಯ ಮೆಟ್ಟಿಲೇರಿದ ಪತ್ನಿ

ಹಾಸನ: ಪ್ರೀತಿಸಿ ಮದುವೆಯಾಗಿ 9 ವರ್ಷ ಸಂಸಾರ ನಡೆಸಿದ ಭೂಪನೋರ್ವ ಇದೀಗ ಮೊದಲ ಪತ್ನಿಗೆ ಕೈಕೊಟ್ಟು, ಮತ್ತೊಂದು ಮದುವೆಯಾಗಲು ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ ಎಂದು ಯುವತಿಯೊಬ್ಬಳು ಪತಿಯ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಕುಂದೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಾಲೇಜಿನಲ್ಲಿಯೇ ಪ್ರೀತಿಯ ಬಲೆಗೆ ಬಿದ್ದಿದ್ದ ಅಕ್ಷತಾ ಹಾಗೂ ಲೋಹಿತ್ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಇವರಿಬ್ಬರ ಮದುವೆಯಾಗಿ 9 ವರ್ಷವಾಗಿದ್ದು, 8 ವರ್ಷದ ಪುತ್ರನಿದ್ದಾನೆ. ಇದೀಗ ಲೋಹಿತ್ ಮೊದಲ ಮದುವೆಯನ್ನು ಮುಚ್ಚಿಟ್ಟು ಬೇರೆ ಮದುವೆಯಾಗಲು ಲೋಹಿತ್ ಪ್ಲ್ಯಾನ್ ಮಾಡುತ್ತಿದ್ದಾನೆ ಎಂದು ಪತ್ನಿ ಅಕ್ಷತಾ ದೂರಿದ್ದಾಳೆ. 

ವಂಚಕ ಪತಿ ಮದುವೆ ವಿಚಾರವನ್ನು ಮುಚ್ಚಿಟ್ಟು ದಕ್ಷಿಣ ಕನ್ನಡ ಮೂಲದ ಯುವತಿ ಜೊತೆಗೆ ನಿಶ್ಚಿತಾರ್ಥ ಮಾಡಿ ಕೊಂಡಿದ್ದಾನೆ ಎಂದು ಪತ್ನಿ ಅಕ್ಷತಾ ಆರೋಪಿಸಿದ್ದಾರೆ. ಸುಳ್ಳು ಹೇಳಿ ಯುವತಿಯನ್ನು ನಂಬಿಸಿರುವ ಬಗ್ಗೆ ಆಡಿಯೋ ಸಾಕ್ಷಿಯೊಂದಿಗೆ ಆಕೆ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದಾಳೆ.

ಈ ಬಗ್ಗೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಅಕ್ಷತಾ, 'ತಾನು ಅನ್ಯ ಜಾತಿಯವಳೆನ್ನುವ ಕಾರಣಕ್ಕೆ ಲೋಹಿತ್ ತಂದೆ ಮಲ್ಲಿಕಾರ್ಜುನ, ತಾಯಿ ಜಯಶೀಲಾ ಕಿರುಕುಳ ನೀಡುತ್ತಿದ್ದರು. ಈಗ ತನ್ನಿಂದ ಪತಿಯನ್ನು ದೂರ ಮಾಡಿ ಮದುವೆ ವಿಚಾರವನ್ನೇ ಮುಚ್ಚಿಟ್ಟು ಮತ್ತೊಂದು ಮದುವೆಗೆ ಪ್ಲ್ಯಾನ್ ಮಾಡಿದ್ದಾರೆ. ಈ ವಂಚನೆ ತಪ್ಪಿಸಿ ನ್ಯಾಯ ಕೊಡಿಸಬೇಕು. ಅದೇ ರೀತಿ ಪತಿ, ಅತ್ತೆ, ಮಾವನ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. 

Ads on article

Advertise in articles 1

advertising articles 2

Advertise under the article

holige copy 1.jpg