-->
ಅಪ್ರಾಪ್ತ ಬಾಲಕಿಯ ಮೇಲೆ 400 ಮಂದಿಯಿಂದ ಅತ್ಯಾಚಾರ...ಪೊಲೀಸರು ಭಾಗಿ...!!

ಅಪ್ರಾಪ್ತ ಬಾಲಕಿಯ ಮೇಲೆ 400 ಮಂದಿಯಿಂದ ಅತ್ಯಾಚಾರ...ಪೊಲೀಸರು ಭಾಗಿ...!!

 
ಮಹಾರಾಷ್ಟ್ರ: ಇದು ಅತ್ಯಂತ ಅಮಾನವೀಯ ಪ್ರಕರಣವೆಂದರೂ ಸರಿಯೇ. ಏಕೆಂದರೆ ಆರೇ ತಿಂಗಳಲ್ಲಿ ಬಾಲಕಿಯೊಬ್ಬಳ ಮೇಲೆ 400 ಮಂದಿ ಅತ್ಯಾಚಾರ ಮಾಡಿರುವ ಪ್ರಕರಣವೊಂದು ನಡೆದಿದ್ದು, ಸದ್ಯ ಆಕೆ ಎರಡು ತಿಂಗಳ ಗರ್ಭಿಣಿ ಎಂಬುದು ತಿಳಿದುಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. 
ಈ ಸಂಬಂಧ ಸಂತ್ರಸ್ತೆಯೇ ದೂರು ನೀಡಿದ್ದು, ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.  

ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್​ಪಿ ಬೀಡ್​ ರಾಜ ರಾಮಸ್ವಾಮಿ ತಿಳಿಸಿದ್ದಾರೆ. ಈ ಬಾಲಕಿ ಮೇಲೆ ಆರು ತಿಂಗಳಲ್ಲಿ 400 ಮಂದಿ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ. ಪೊಲೀಸರು ಕೂಡ ಬಾಲಕಿಯನ್ನು ಲೈಂಗಿಕವಾಗಿ ಶೋಷಣೆ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ.

Ads on article

Advertise in articles 1

advertising articles 2

Advertise under the article