ಮಂಗಳೂರಿನಲ್ಲಿ ಮತ್ಸ್ಯಕನ್ಯೆ ಎಂಬ ಸುಳ್ಳು ಸುದ್ದಿ- ಇದರ ಸತ್ಯ ಕಥೆ ಏನು? ಇಲ್ಲಿದೆ ಮಾಹಿತಿ- ORIGINAL VIDEO ಇಲ್ಲಿದೆ

 


 

ಮಂಗಳೂರು: ಇಂದು ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯ ವಿಡಿಯೋವೊಂದು ವೈರಲ್ ಆಗಿತ್ತು . ಮಂಗಳೂರಿನಲ್ಲಿ ಮತ್ಸ್ಯ ಕನ್ಯೆ ಪತ್ತೆಯಾಗಿದ್ದಾಳೆ ಎಂಬ ವಿಡಿಯೋ ಮತ್ತು ಬರಹ ವೈರಲ್ ಆಗಿದ್ದು ಇದರ ಸತ್ಯಾಸತ್ಯತೆ ಇಲ್ಲದೆ

 ಸಾಮಾಜಿಕ ಜಾಲತಾಣದಲ್ಲಿ ಬರುವ ಆಧಾರರಹಿತ ಸುದ್ದಿಗಳನ್ನು ನಂಬಿ ಬಿಡುವವರು ಸಾಕಷ್ಟು ಜನರಿದ್ದಾರೆ. ಇದೇ ರೀತಿಯಲ್ಲಿ ಮತ್ಸ್ಯ ಕತ್ಯೆ ಪತ್ತೆ ಎಂಬ ಸುಳ್ಳು ಸುದ್ದಿಯನ್ನು ನಂಬಿ ಜನರು ಇನ್ನಷ್ಟು ಗ್ರೂಪ್ ಗಳಿಗೆ ಫಾರ್ವರ್ಡ್ ಮಾಡಿ ಮತ್ತಷ್ಟು ಜನರನ್ನು ಗೊಂದಲಕ್ಕೆ ತಳ್ಳಿದ್ದಾರೆ.




 

 ಮತ್ಸ್ಯಕನ್ಯೆ ಪತ್ತೆ ಎಂಬುದಕ್ಕೆ ಪುಷ್ಠಿಕರೀಸಲು ವಿಡಿಯೋವೊಂದನ್ನು ಹಾಕಿದ್ದು ಈ ವಿಡಿಯೋದಲ್ಲಿ ಮತ್ಸ್ಯಕನ್ಯೆ ಇದೆ ಎಂದು ನಂಬುವಂತೆ ಮಾಡಲಾಗಿದೆ. ಇದನ್ನು ನಂಬಿದ ಕೆಲವೊಂದು ಕಾಪಿ ಪೇಸ್ಟ್ ವೆಬ್ ಸೈಟ್ ಗಳು, ಯೂಟ್ಯೂಬ್ ಚಾನೆಲ್ ಗಳು ಸುದ್ದಿಯೆನ್ನುವಂತೆ ಭಿತ್ತರಿಸಿದೆ.

 

ಅಸಲಿಗೆ ಈ ವಿಡಿಯೋ ಮಂಗಳೂರಿನದಲ್ಲ. ಇದು ಶ್ರೀಲಂಕಾದಲ್ಲಿ ತಯಾರಾಗಿರುವ ವಿಡಿಯೋ. 4 ತಿಂಗಳ ಹಿಂದೆ ಶ್ರಿಲಂಕಾದಲ್ಲಿ ತಯಾರಾಗಿರುವ ಈ ವಿಡಿಯೋ ಕೂಡ ನೈಜ ಘಟನೆಯಲ್ಲ .  



trip pisso  ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ಇದನ್ನು ಪ್ರಸಾರ ಮಾಡಲಾಗಿತ್ತು. 8.40 ನಿಮಿಷದ ವಿಡಿಯೋದ ಕೆಲಭಾಗವನ್ನು ಮಾತ್ರ ಕಟ್ ಮಾಡಿ ವೈರಲ್  ಮಾಡಲಾಗಿದೆ. ಜೂನ್  8  ವರ್ಲ್ಡ್ ಓಷಿಯನ್ ಡೇ ಪ್ರಯುಕ್ತ ಈ ವಿಡಿಯೋ ಮಾಡಿ  ಸಮುದ್ರ ಮಾಲೀನ್ಯದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿ  ಈ ವಿಡಿಯೋವನ್ನು 2021 ಜೂನ್ 7 ರಂದು ಅಪ್ಲೋಡ್ ಮಾಡಲಾಗಿತ್ತು. 


ಕುಚೇಷ್ಟೆ ಮಾಡಬೇಕೆಂದು ಯಾರೋ ಒಬ್ಬರು ಈ ವಿಡಿಯೋದ ಕೆಲಭಾಗವನ್ನು ಕಟ್ ಮಾಡಿ ಮಂಗಳೂರಿನಲ್ಲಿ ಮತ್ಸ್ಯ ಕನ್ಯೆ ಎಂದು ವೈರಲ್ ಮಾಡಿದ್ದಾರೆ.