-->
2 ವರ್ಷದ ಪುತ್ರನನ್ನು ಕೊಲೆಗೈದು ಸೂಪರ್ ಮಾರ್ಕೆಟ್ ಚೆಕ್ ಕೌಂಟರ್ ನಲ್ಲಿ ಎಸೆದ ಮಾಜಿ ಪೋರ್ನ್ ಸ್ಟಾರ್!

2 ವರ್ಷದ ಪುತ್ರನನ್ನು ಕೊಲೆಗೈದು ಸೂಪರ್ ಮಾರ್ಕೆಟ್ ಚೆಕ್ ಕೌಂಟರ್ ನಲ್ಲಿ ಎಸೆದ ಮಾಜಿ ಪೋರ್ನ್ ಸ್ಟಾರ್!

ರೋಮ್​: ಪೋರ್ನ್ ಸ್ಟಾರ್ ಮೆರೆದಾಕೆ ನಿರ್ದಯಿಯಾಗಿ ತನ್ನ ಎರಡು ವರ್ಷದ ಮಗುವನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಭಯಾನಕ ಘಟನೆ ಇಟಲಿಯಲ್ಲಿ ನಡೆದಿದೆ. ಇದೀಗ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಹಂಗೇರಿಯನ್​ನ ಮಾಜಿ ಪೋರ್ನ್ ಸ್ಟಾರ್ ಕ್ಯಾಟಲಿನ್​ ಎಲ್ಜೆಬೆತ್​ ಬ್ರಾಡ್ಯಾಕ್ಸ್​ (44) ಬಂಧಿತ ಆರೋಪಿ. ಎಲ್ಜೆಬೆತ್​ ಬ್ರಾಡ್ಯಾಕ್ಸ್​ 2 ವರ್ಷದ ತನ್ನ ಮಗ ಅಲೆಕ್ಸ್​ ಯುಹಾಸ್​ನನ್ನು ಕೊಲೆ ಮಾಡಿದ್ದಾಳೆಂಬ ಆರೋಪದ ಮೇಲೆ  ಪೊಲೀಸರು ಬಂಧಿಸಿದ್ದಾರೆ.

ನೈಟ್​ ಕ್ಲಬ್​ ಡ್ಯಾನ್ಸರ್​ ಆಗಿದ್ದ ಆರೋಪಿತೆ ಎಲ್ಜೆಬೆತ್​ ಬ್ರಾಡ್ಯಾಕ್ಸ್ ಇಟಲಿಯ ಉಂಬ್ರಿಯಾದಲ್ಲಿರುವ ಲಿಡ್ಲ್​ ಸ್ಟೋರ್​ ಎಂಬಲ್ಲಿಗೆ ಅಕ್ಟೋಬರ್​ 1ರಂದು ಹೋಗಿದ್ದಾಳೆ. ಬಳಿಕ ತನ್ನ ಮಗುನನ್ನು ಹತ್ಯೆ ಮಾಡಿ ಮೃತದೇಹವನ್ನು ಲಿಡ್ಲ್ ಸ್ಟೋರ್​ನ ಚೆಕ್ಔಟ್ ಕೌಂಟರ್​ನಲ್ಲಿ ಎಸೆದು   ಪರಾರಿಯಾಗಿದ್ದಳು. ಮಗುವಿನ ದೇಹದಲ್ಲಿ 9 ಕಡೆಗಳಲ್ಲಿ‌ ಗಾಯದ ಗುರುತುಗಳು ಪತ್ತೆಯಾಗಿವೆ. ಎದೆ ಹಾಗೂ ಕತ್ತಿನ ಭಾಗದಲ್ಲಿ ಚೂರಿಯಿಂದ ಇರಿದಿದ್ದಾಳೆ. ಅ.1ರಂದು ರಾತ್ರಿಯೇ ಒಂಬತ್ತು ರಂಧ್ರಗಳಿರುವ ಅಲೆಕ್ಸ್‌ನ ರಕ್ತಸಿಕ್ತ ಟಿ-ಶರ್ಟ್ ಮತ್ತು ಬ್ರಾಡಾಕ್ ಜಂಪರ್ ಸೇರಿದಂತೆ ಬಹಳಷ್ಟು ವಸ್ತುಗಳು ಪತ್ತೆಯಾಗಿವೆ. 

ತನ್ನನ್ನು ವಿವಾಹವಾಗಿ ದೂರವಾಗಿರುವ ಮಗುವಿನ ತಂದೆಯ ಮೇಲೆ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಮಾಡಿದ್ದಾಳೆಂದು ಪೊಲೀಸರಿಗೆ ‌ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಮಗುವಿನ ತಾಯಿ ಎಲ್ಜೆಬೆತ್​ ಬ್ರಾಡ್ಯಾಕ್ಸ್​ ಪುತ್ರನ ಮೃತದೇಹದ ಫೋಟೊವನ್ನು ಸೂಪರ್ ಮಾರ್ಕೆಟ್‌ಗೆ ಹೋಗುವ ಮುನ್ನವೇ ಹಂಗೇರಿಯಲ್ಲಿ ವಾಸಿಸುವ ಅಲೆಕ್ಸ್ ತಂದೆಯ ವಾಟ್ಸ್ಆ್ಯಪ್ ಗೆ ಕಳುಹಿಸಿದಳು ಎಂದು ತಿಳಿದುಬಂದಿದೆ.‌ ಈ ಬಗ್ಗೆ ಆತನೇ ಪೊಲೀಸ್ ಗೆ ದೂರು ನೀಡಿದ್ದ. 

ಬಳಿಕ ಆರೋಪಿತೆ ಕ್ಯಾಟಲಿನ್​ ಎಲ್ಜೆಬೆತ್​ ಬ್ರಾಡ್ಯಾಕ್ಸ್​ಳನ್ನು ಇಟಲಿ ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಚಾಕುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆಕೆಯನ್ನು ತನಿಖೆಗೆ ಒಳಪಡಿಸಲಾಗಿದೆ. ಆದರೆ, ಆಕೆ ಮಾತ್ರ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದು, ತಾನು ಈ ಕೊಲೆ ಮಾಡಿಲ್ಲ ಎಂದು ಪದೇ ಪದೇ ಹೇಳುತ್ತಿದ್ದಾಳೆ. ಸದ್ಯ ಆಕೆಯ ಮೇಲೆ ಕೊಲೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Ads on article

Advertise in articles 1

advertising articles 2

Advertise under the article