-->
ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಿರುವ ನಟಿ ಸಮಂತಾ: ಒಳ ಉಡುಪಿನ ಫೋಟೊ ನೋಡಿ ಹುಬ್ಬೇರಿಸಿದ ನೆಟ್ಟಿಗರು

ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಿರುವ ನಟಿ ಸಮಂತಾ: ಒಳ ಉಡುಪಿನ ಫೋಟೊ ನೋಡಿ ಹುಬ್ಬೇರಿಸಿದ ನೆಟ್ಟಿಗರು

ಹೈದರಾಬಾದ್​: ಸ್ಟಾರ್ ದಂಪತಿಗಳಾದ ನಾಗಚೈತನ್ಯ ಹಾಗೂ ಸಮಂತಾ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನ​ ಹಂತಕ್ಕೆ ತಲುಪಿದೆ ಎಂಬ ವಿಚಾರ ಬೆಳಕಿಗೆ ಬಂದಾಗಿನಿಂದ ಸಮಂತಾ ಟಾಕ್​ ಆಫ್​ ದಿ ಟೌನ್​ ಆಗಿದ್ದಾರೆ. ಅಲ್ಲದೆ ನಟಿ ಸಮಂತಾ ಅಕ್ಕಿನೇನಿ ಕುಟುಂಬದಿಂದಲೂ ಅಂತರ ಕಾಯ್ದುಕೊಂಡಿದ್ದಾರೆ. ಇತ್ತೀಚೆಗೆ ಅಕ್ಕಿನೇನಿ ನಾಗಾರ್ಜುನ್​ ಬರ್ತ್ ಡೇ ಪಾರ್ಟಿಯಲ್ಲೂ ಅವರು ಕಾಣಿಸಿಕೊಳ್ಳಲಿಲ್ಲ. ಇದರಿಂದ ನಾಗಚೈತನ್ಯ-ಸಮಂತಾ ನಡುವೆ ಏನೇನೂ ಸರಿಯಿಲ್ಲ ಎಂಬುದು ಬಹುತೇಕ ಖಚಿತವಾಗುತ್ತಿದೆ.

ಈ ವಿಚಾರವುದಲ್ಲಿ ದಿನ ದಿನವು ಗುಲ್ಲೆಬ್ಬುತ್ತಿದ್ದರೂ, ಇಬ್ಬರೂ ಎಲ್ಲಿಯೂ ತಮ್ಮ ವೈವಾಹಿಕ ಸಂಬಂಧದ ಬಗ್ಗೆ ಬಾಯ್ಬಿಡುತ್ತಿಲ್ಲ. ಈ ನಡುವೆ ಸಮಂತಾ ಶೂಟಿಂಗ್​ನಿಂದ ಬಿಡುವು ಪಡೆದುಕೊಂಡು ಜಾಲಿಮೂಡ್​ನಲ್ಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಸಮಂತಾ ಇತ್ತೀಚೆಗಷ್ಟೇ ತಾವು ಗೋವಾದಲ್ಲಿ ಕಳೆದ ಸುಂದರ ಕ್ಷಣಗಳ ಒಂದಷ್ಟು ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲಿಯೂ ನಾಗಚೈತನ್ಯ ಕಾಣದಿರುವುದು ಇವರ ನಡುವೆ ಇರುವ ಊಹಾಪೋಹಗಳಿಗೆ ರೆಕ್ಕೆಬಂದಾಂತಾಗಿದೆ. 

ಸಮಂತಾ ಸಿನಿಮಾದಿಂದಾಚೆಗೂ ಭಾರೀ ಹಣ ಸಂಪಾದಿಸುತ್ತಿದ್ದಾರೆ. ಇದೀಗ ಅವರು ತಮ್ಮ ಸೈಡ್​ ಇನ್​ಕಮ್​ನಿಂದ ಎಲ್ಲರ ಹುಬ್ಬೇರಿಸಿದ್ದಾರೆ. ಜಾಲತಾಣದಲ್ಲಿ ಸದಾ ತಮ್ಮ ಮಾದಕ ಫೋಟೋಗಳನ್ನು ಶೇರ್ ಮಾಡುತ್ತಿರುವ ಸಮಂತಾ, ಇನ್​ಸ್ಟಾಗ್ರಾಂನಲ್ಲಿ 15 ಮಿಲಿಯನ್​ಗೂ ಅಧಿಕ ಫಾಲೋವರ್ಸ್​ ಗಳನ್ನು ಹೊಂದಿದ್ದಾರೆ.

ಸಮಂತಾ ಯಾವಾಗಲೂ ತಮ್ಮ ಜಾಲತಾಣಗಳಲ್ಲಿ ಲೂಯಿಸ್ ವಿಟಾನ್ ಬಟ್ಟೆ ಮತ್ತು ಬ್ಯಾಗ್‌ಗಳು ಸೇರಿದಂತೆ ಅನೇಕ ಬ್ರ್ಯಾಂಡ್​ಗಳ ಬಗ್ಗೆ ಪ್ರಚಾರ ನಡೆಸುತ್ತಿರುತ್ತಾರೆ. ಪ್ರತಿಯೊಂದು ಬ್ರ್ಯಾಂಡ್​ ನ ಪ್ರಚಾರಗಳಿಗೂ ಸಮಂತಾ ಪೊಸ್ಟ್​‌ನ ಆಧಾರದ ಮೇಲೆ ಬೆಲೆ ನಿಗದಿ ಮಾಡುತ್ತಾರೆ. ಮೂಲಗಳ ಪ್ರಕಾರ ಸಮಂತಾ ತಮ್ಮ ಇನ್​ಸ್ಟಾಗ್ರಾಂನ ಪ್ರತಿ ಪೋಸ್ಟ್​ಗೆ 7-13 ಲಕ್ಷ ರೂ. ಚಾರ್ಜ್​ ಮಾಡುತ್ತಾರಂತೆ. ಜೊತೆಗೆ ಪ್ರತೀ ಇನ್​ಸ್ಟಾಗ್ರಾಂ ಸ್ಟೋರಿಗೆ ಶೇ.70 ರಷ್ಟು ಚಾರ್ಜ್​ ಮಾಡುತ್ತಾರಂತೆ. ಇದೀಗ ಅವರು ಲೂಯಿಸ್ ವಿಟಾನ್ ಸಂಸ್ಥೆಯ ಬ್ಯಾಗ್​ ಹಿಡಿದು ಮಾದಕ ಫೋಸ್​ ನೀಡಿದ್ದಾರೆ. ಕೇವಲ ಬ್ರಾ ತೊಟ್ಟುಕೊಂಡು ಕಾಣಿಸಿಕೊಂಡಿರುವುದು ಎಲ್ಲರ ಹುಬ್ಬೇರಿಸುವಂತಾಗಿದೆ. ನಾಗಚೈತನ್ಯ ವೈಮನಸ್ಸಿಗೆ ಆಕೆ ಈ ರೀತಿ ಕಾಣಿಸಿಕೊಂಡಿರುವುದು ಕಾರಣವಾಗಿರಬಹುದೆಂದು ಕಾಲೆಳೆದಿದ್ದಾರೆ. ಏನೇ ಆಗಲಿ ಸಮಂತಾ ಈ ಮಾದಕ ದೃಶ್ಯ ಎಲ್ಲರ ಗಮನ ಸೆಳೆದಿದ್ದಂತೂ ಸತ್ಯ.

Ads on article

Advertise in articles 1

advertising articles 2

Advertise under the article