ರಾತ್ರಿ ವೇಳೆ ಹೊರಗಡೆ ಹೋದ ಬಾಲಕಿ ಮೇಲೆ ಕಾಮುಕರ ಅಟ್ಯಾಕ್ ....ಮುಂದಾಗಿದ್ದು...!!

ಬಸ್ತಿ( ಉತ್ತರ ಪ್ರದೇಶ): ಹದಿನೈದು ವರ್ಷ ದ ಬಾಲಕಿ ಪ್ರಕೃತಿ ಕರೆಗೆ ಹೋಗಿದ್ದ ಸಂದರ್ಭದಲ್ಲಿ ಆಕೆಯ ಮೇಲೆ ಕೆಲವು ದುಷ್ಕರ್ಮಿಗಳು ಅತ್ಯಾಚಾರಕ್ಕೆ ಯತ್ನಿಸಿದ್ದು, ಈ ವೇಳೆ ಆಕೆವಿರೋಧ ವ್ಯಕ್ತಪಡಿಸಿದಾಗ, ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಪ್ರಕೃತಿ ಕರೆಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಬಾಲಕಿ ರಾತ್ರಿ 10 ಗಂಟೆಗೆ ಹೊರಹೋಗಿದ್ದಳು. ತುಂಬಾ ಸಮಯವಾದರೂ ಆಕೆಗೆ ವಾಪಸ್​ ಬರದ ಕಾರಣ ಮನೆಯವರು ಹುಡುಕಾಟ ನಡೆಸಿ. ಬೆಳಗಿನ ಜಾವ 5 ಗಂಟೆಗೆ ಆಕೆ ಸಿಕ್ಕಿದ್ದಾಳೆ. ಈ ವೇಳೆ ಅರೆಬೆತ್ತಲಾಗಿದ್ದಳು ಮತ್ತು ಬಾಯಿಯಲ್ಲಿ ಬ್ಲೇಡ್​ ಹಾಕಲಾಗಿತ್ತು. ದೇಹದ ಕೆಲವೊಂದು ಭಾಗಗಳಲ್ಲಿ ಬ್ಲೇಡ್​ನಿಂದ ಕತ್ತರಿಸಿರುವ ಗುರುತು ಪತ್ತೆಯಾಗಿವೆ.

ಬಾಲಕಿಯನ್ನ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ.ಇದೀಗ ಸಂತ್ತಸ್ತೆಯ ಸಹೋದರ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಪೊಲೀಸರು ತಿಳಿಸಿದ್ದಾರೆ.
BREAKING NEWS
Loading latest news...
Join our WhatsApp Channel Powered By : Online Pudu