-->

NSUI ON  RGUHS- ರಾಜೀವ್ ಗಾಂಧಿ ವಿ ವಿ ಮರುವಿನ್ಯಾಸ ಪ್ರಕ್ರಿಯೆ :ತಜ್ಞರ ಸಮಿತಿಯಲ್ಲಿ ಕಾನೂನು, ವೈದ್ಯಕೀಯ, ಶಿಕ್ಷಣ ತಜ್ಞರ ಸೇರ್ಪಡೆಗೆ  NSUI ನಾಯಕ ಸಂಜಯ್ ರಾಜ್ ಆಗ್ರಹ

NSUI ON RGUHS- ರಾಜೀವ್ ಗಾಂಧಿ ವಿ ವಿ ಮರುವಿನ್ಯಾಸ ಪ್ರಕ್ರಿಯೆ :ತಜ್ಞರ ಸಮಿತಿಯಲ್ಲಿ ಕಾನೂನು, ವೈದ್ಯಕೀಯ, ಶಿಕ್ಷಣ ತಜ್ಞರ ಸೇರ್ಪಡೆಗೆ NSUI ನಾಯಕ ಸಂಜಯ್ ರಾಜ್ ಆಗ್ರಹ

ರಾಜೀವ್ ಗಾಂಧಿ ವಿ ವಿ ಮರುವಿನ್ಯಾಸ ಪ್ರಕ್ರಿಯೆ :ತಜ್ಞರ ಸಮಿತಿಯಲ್ಲಿ ಕಾನೂನು, ವೈದ್ಯಕೀಯ, ಶಿಕ್ಷಣ ತಜ್ಞರ ಸೇರ್ಪಡೆಗೆ  NSUI ನಾಯಕ ಸಂಜಯ್ ರಾಜ್ ಆಗ್ರಹ



ಎನ್ಎಸ್ಯುಐ-ಕರ್ನಾಟಕ ಘಟಕದ ಗಮನಕ್ಕೆ ಬಂದಂತೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವಿರುದ್ಧ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅನೇಕ ಮೊಕದ್ದಮೆಗಳು ದಾಖಲಾಗಿವೆ ಹಾಗೂ ವಿಶ್ವವಿದ್ಯಾಲಯಗಳು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಆಧ್ಯಾದೇಶಗಳನ್ನು ಆಡಳಿತಾತ್ಮಕವಾಗಿ ಮರುವಿನ್ಯಾಸಗೊಳಿಸುವುದಕ್ಕೆ ಇದು ಸಕಾಲವಾಗಿದೆ. ತಜ್ಞರ ಸಮಿತಿಯಲ್ಲಿ ಕಾನೂನು, ವೈದ್ಯಕೀಯ, ಶಿಕ್ಷಣ ತಜ್ಞರ ಸೇರ್ಪಡೆಗೆ  NSUI ನಾಯಕ ,    ರಾಜೀವ್ ಗಾಂಧಿ ಅರೋಗ್ಯ ವಿಶ್ವವಿದ್ಯಾನಿಲಯ ಉಸ್ತುವಾರಿ  ಸಂಜಯ್ ರಾಜ್ ಒತ್ತಾಯಿಸಿದ್ದಾರೆ.

ಪ್ರಸ್ತುತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ವಿವಿಧ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ಅನೇಕ ಕುಂದು-ಕೊರತೆಗಳ ಬಗ್ಗೆ ವಿಶ್ವವಿದ್ಯಾನಿಲಯದ ವಿರುದ್ಧ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿರುತ್ತಾರೆ.

ಬಹುತೇಕ ಕುಂದುಕೊರತೆಗಳು ಮೌಲ್ಯಮಾಪನ ಮತ್ತು ಮರುಮೌಲ್ಯಮಾಪನದ ಪ್ರಕ್ರಿಯೆಗೆ ಸಂಬಂಧಿಸಿದಂತೆ ಇವೆ. 2021 ರಲ್ಲಿ ವಿಶ್ವವಿದ್ಯಾಲಯದ ವಿರುದ್ಧ  ಮಾನ್ಯ ಉಚ್ಚ ನ್ಯಾಯಾಲಯದ ಪ್ರಧಾನ ಪೀಠ ಒಂದರಲ್ಲೇ ಸರಿಸುಮಾರು 644 ಪ್ರಕರಣಗಳು ದಾಖಲಾಗಿರುತ್ತದೆ.

ಪ್ರಕರಣಗಳ ಸಂಖ್ಯೆಯನ್ನು ಗಮನಿಸಿದರೆ, ವಿಶ್ವವಿದ್ಯಾಲಯದ ಆಡಳಿತ ವೈಖರಿಯಲ್ಲಿಯೇ ಗಂಭೀರ ಹಾಗೂ ಆಳವಾದ ಸಮಸ್ಯೆ ಇರುವುದು ಕಂಡುಬರುತ್ತದೆ. ಇದರಿಂದಾಗಿ ವಿಶ್ವವಿದ್ಯಾಲಯಗಳಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಮೌಲ್ಯಮಾಪನ ಮತ್ತು ಮರುಮೌಲ್ಯಮಾಪನ ಮಾರ್ಗದಲ್ಲಿ ಮಹತ್ತರ ಸುಧಾರಣೆಯ ಅಗತ್ಯವಿದೆ ಎಂಬುದು ಕಂಡುಬರುತ್ತದೆ.

ವಿಶ್ವವಿದ್ಯಾಲಯಗಳು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಆಧ್ಯಾದೇಶಗಳನ್ನು ಆಡಳಿತಾತ್ಮಕವಾಗಿ ಮರುವಿನ್ಯಾಸಗೊಳಿಸುವುದಕ್ಕೆ ಇದು ಸಕಾಲವಾಗಿದೆ ಮತ್ತು ಇದರಿಂದಾಗಿ ತಕರಾರುಗಳನ್ನು ಕಡಿಮೆ ಮಾಡಬಹುದು ಎಂಬುದಾಗಿ ನಾವು ನಂಬುತ್ತೇವೆ ಎಂದು ಸಂಜಯ್ ರಾಜ್ ಹೇಳಿದ್ದಾರೆ.

ಅಧ್ಯಾದೇಶಗಳನ್ನು ಮರುವಿನ್ಯಾಸಗೊಳಿಸುವ ಪ್ರಕ್ರಿಯೆಯನ್ನು ತಜ್ಞರ ಸಮಿತಿಯು ಕೈಗೊಳ್ಳಬೇಕಿದ್ದು, ಸದರಿ ತಜ್ಞರ ಸಮಿತಿಯಲ್ಲಿ ಕಾನೂನು ತಜ್ಞರು, ವೈದ್ಯಕೀಯ ವೃತ್ತಿತಜ್ಞರು ಮತ್ತು ಶಿಕ್ಷಣ ತಜ್ಞರು ಇರಬೇಕು ಎಂದು ಸಂಜಯ್ ರಾಜ್ ಆಗ್ರಹಿಸಿದ್ದಾರೆ.

ಸದರಿ ತಜ್ಞರ ಸಮಿತಿಯು ತನ್ನ ಕರ್ತವ್ಯ ನಿರ್ವಹಿಸುವಾಗ ವಿಶ್ವವಿದ್ಯಾಲಯದ ವಿರುದ್ಧ ಸಲ್ಲಿಸಲಾಗಿರುವ ವಿವಿಧ ರೀತಿಯ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ಮಾನ್ಯ ಕರ್ನಾಟಕ ಉಚ್ಚನ್ಯಾಯಾಲಯವು ಇಂದಿನವರೆಗೂ ನೀಡಿರುವ ಎಲ್ಲಾ ನಿರ್ದೇಶನಗಳನ್ನೂ ಪರಿಗಣಿಸಬೇಕಿದೆ. ಇದರಿಂದಾಗಿ ಬಹಳ ಕಾಲದಿಂದ ನಿರಂತರವಾಗಿ ಕಾಡುತ್ತಿರುವ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಒದಗಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Ads on article

Advertise in articles 1

advertising articles 2

Advertise under the article