ಬ್ರೇಕಿಂಗ್ ನ್ಯೂಸ್

[getTicker results="10" label="recent" type="ticker"]

Mangaluru: ಮಹಿಳೆಯರ ಮೇಲೆ ದಾಳಿ ನಡೆಸಿರುವ ಆರೋಪಿಯ ಗುರುತು ಪತ್ತೆ

ಮಂಗಳೂರು: ಡಯೆಟ್ ಶಿಕ್ಷಣ ಸಂಸ್ಥೆಯೊಳಗೆ ಆಗಮಿಸಿ ಮೂವರು ಮಹಿಳಾ ಸಿಬ್ಬಂದಿಯ ಮೇಲೆ ತಲವಾರು ದಾಳಿ ನಡೆಸಿರುವ ಆರೋಪಿಯ ಗುರುತು ಪತ್ತೆಯಾಗಿದೆ.

ಕುಂದಾಪುರ ನಿವಾಸಿ ನವೀನ್(31) ಆರೋಪಿ.

ಆರೋಪಿ ನವೀನ್ ಇಂದು ಮಧ್ಯಾಹ್ನ 12.30-1 ಗಂಟೆ ಸುಮಾರಿಗೆ DIET(District Institute Of education & Training) ಕ್ಯಾಂಪಸ್ ನೊಳಗೆ ಆಗಮಿಸಿ ಏಕಾಏಕಿ ಅಲ್ಲಿನ ಮೂವರು ಮಹಿಳಾ ಸಿಬ್ಬಂದಿಯ ಮೇಲೆ ತಲವಾರು ದಾಳಿ ನಡೆಸಿದ್ದಾನೆ. 


ಗಾಯಾಳುಗಳನ್ನು ನಗರದ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ ಆಸ್ಪತ್ರೆ, ಕದ್ರಿಯಲ್ಲಿನ ವಿನಯ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಆದರೆ ಹಣೆ, ಬೆನ್ನು, ಕೈ, ತಲೆಗಳಿಗೆ ಗಾಯಗೊಂಡಿದ್ದಾರೆ.

ಈತನ ತಲವಾರು ದಾಳಿಯಿಂದ ಬೆದರಿ ಮಹಿಳೆಯರ ಚೀರಾಟ ಕೇಳಿ ಪಕ್ಕದಲ್ಲಿಯೇ ಇದ್ದ ಜೈಲು ಸಿಬ್ಬಂದಿ, ಸ್ಥಳೀಯರು ಆಗಮಿಸಿ ಆರೋಪಿಯನ್ನು ಹಿಡಿದಿದ್ದಾರೆ. ಆದರೆ ಆರೋಪಿಯ ಗುರುತು ಪತ್ತೆ ಆಗಿರಲಿಲ್ಲ. ಇದೀಗ ಆತನ ಗುರುತು ಪತ್ತೆಯಾಗಿದ್ದು, ದಾಳಿ ಯಾಕೆ ನಡೆಸಿದ್ದಾನೆಂದು ಇನ್ನಷ್ಟೇ ತಿಳಿದು ಬರಬೇಕಿದೆ.

ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.