-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಕಾಸ್ಟ್ ಕೌಚಿಂಗ್ ಬಗ್ಗೆ ಮೌನ ಮುರಿದ ಮಲ್ಲಿಕಾ ಶೆರಾವತ್: 'ಕೆಲ ಹೀರೋಗಳು ತೆರೆಯ ಮರೆಯಲ್ಲೂ ಬೆತ್ತಲಾಗೋಕೆ ಕರೆದಿದ್ದರು...!'

ಕಾಸ್ಟ್ ಕೌಚಿಂಗ್ ಬಗ್ಗೆ ಮೌನ ಮುರಿದ ಮಲ್ಲಿಕಾ ಶೆರಾವತ್: 'ಕೆಲ ಹೀರೋಗಳು ತೆರೆಯ ಮರೆಯಲ್ಲೂ ಬೆತ್ತಲಾಗೋಕೆ ಕರೆದಿದ್ದರು...!'

ಮುಂಬೈ: ಸಿನಿಮಾ ರಂಗದಲ್ಲಿ ಕಾಸ್ಟಿಂಗ್​ ಕೌಚ್ ಇದೆ ಎಂದು ‌ಬಹಿರಂಗ ಪಡಿಸುತ್ತಿರುವ ಕೆಲ ನಟಿಯರು ತಮಗಾದ ಕಹಿ ಅನುಭವಗಳ ಬಗ್ಗೆ ಹೇಳಿಕೊಳ್ಳುತ್ತಲೇ ಇದ್ದಾರೆ.‌ಈ ವಿಚಾರಗಳ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಚರ್ಚೆಗಳಗಾಗುತ್ತಿದೆ. ಅವಕಾಶಗಳಿಗಾಗಿ ನಟಿಯರು ಒಂದಷ್ಟು ಸಹಕರಿಸಬೇಕು, ಕಾಂಪ್ರಮೈಸ್​ ಆಗಬೇಕು ಎನ್ನುವ ಆರೋಪ ಖ್ಯಾತ ನಿರ್ದೇಶಕರು ಹಾಗೂ ನಟರ ಮೇಲೆ ಬರುತ್ತಿದೆ. 

ಬಾಲಿವುಡ್​ನಲ್ಲಿ ಬೋಲ್ಡ್ ದೃಶ್ಯಗಳಿಂದಲೇ ಖ್ಯಾತರಾದ ನಟಿ ಮಲ್ಲಿಕಾ ಶೆರಾವತ್​ ಕೂಡ ಕಾಸ್ಟಿಂಗ್​ ಕೌಚ್ ಬಗ್ಗೆ ಮೌನ ಮುರಿದಿದ್ದಾರೆ. ಮಲ್ಲಿಕಾ ಶೆರಾವತ್ ಸಾಕಷ್ಟು ಸಿನಿಮಾಗಳಲ್ಲಿ ಬೋಲ್ಡ್​ ಪಾತ್ರಗಳಲ್ಲಿ ನಟಿಸಿ ಪಡ್ಡೆ ಹುಡುಗರ ಮನ ಗೆದ್ದಿದ್ದರು. ಅವರು ಕಿಸ್ಸಿಂಗ್​ ಸೀನ್ಸ್, ಅರೆ ನಗ್ನ ದೃಶ್ಯಗಳನ್ನು ಯಾವುದೇ ಮುಜುಗರವಿಲ್ಲದೆ ಮಾಡುತ್ತಿರುವುದರಿಂದ ಒಂದು ಇಂಟಿಮೇಟ್​ ದೃಶ್ಯ ಹಾಗೂ ಕಿಸ್ಸಿಂಗ್​ ದೃಶ್ಯಗಳನ್ನು ನಿರ್ದೇಶಕರು ಇಡುತ್ತಿದ್ದರು. 

ಇದನ್ನು ನೋಡಿ ಅನೇಕ ಸ್ಟಾರ್​ ನಟರು ಮಲ್ಲಿಕಾ ಅವರಿಗೆ ಹತ್ತಿರವಾಗಿ ಅವರಿಂದ ಬೆನಿಫಿಟ್​ ಪಡೆಯೋಕೆ ಪ್ರಯತ್ನಿಸಿದ್ದರು ಎನ್ನಲಾಗುತ್ತಿದೆ. ಈ ಬಗ್ಗೆ ಮುಕ್ತವಾಗಿ ಮಾತನಾಡಿರುವ ಮಲ್ಲಿಕಾ ಶೆರಾವತ್ 'ತಾನು ನೇರವಾಗಿ ಕಾಸ್ಟಿಂಗ್​ ಕೌಚ್​ ಅನ್ನು ಎದುರಿಸಿಲ್ಲ. ನನಗೆ ಸ್ಟಾರ್​ಡಮ್​ ಸುಲಭವಾಗಿ ದೊರಕಿತ್ತು. ನಟನೆ ಮಾಡುದಕ್ಕೆಂದು ಮುಂಬೈಗೆ ಬರುತ್ತಿದ್ದಂತೆ ಆಫರ್​ಗಳು ಸಿಕ್ಕವು. ಪಾತ್ರಕ್ಕಾಗಿ, ಹೆಚ್ಚು ಕಷ್ಟಪಡುವ​ ಪರಿಸ್ಥಿತಿ ಎದುರಾಗಿರಲ್ಲ.

‘ಮರ್ಡರ್’​ ಸಿನಿಮಾದಲ್ಲಿ ನಾನು ಸ್ವಲ್ಪ ಬೋಲ್ಡ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ತೆರೆಯ ಮೇಲೆ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರಿಂದ, ಸಾಕಷ್ಟು ನಟರು ನನ್ನ ಬಳಿ ಬೇರೆ ರೀತಿಯಲ್ಲಿ ಮಾತನಾಡೋಕೆ ಶುರು ಮಾಡಿದರು. ನೀವು ತೆರೆಯ ಮೇಲೆ ಮಾತ್ರವಲ್ಲ ನಮ್ಮ ಜತೆ ತೆರೆಯ ಮರೆಯಲ್ಲೂ ಆ ರೀತಿ ಇರಬಹುದು ಎಂದು ತಮ್ಮೊಂದಿಗೆ ಬೆತ್ತಲಾಗೋಕೆ ಹೀರೋಗಳು ಆಹ್ವಾನ ನೀಡಿದ್ದರು ಎಂದಿದ್ದಾರೆ ಮಲ್ಲಿಕಾ. ಈ 

ಆದರೆ, ಮಲ್ಲಿಕಾ ಎಲ್ಲಿಯೂ ಬೆತ್ತಲಾಗೋಕೆ ಹೇಳಿರುವ ಹೀರೋಗಳ ಹೆಸರುಗಳನ್ನು ಬಹಿರಂಗ ಪಡಿಸಿಲ್ಲ. ‘ನಾನು ಯಾವುದೇ ಕಾರಣಕ್ಕೂ ಕಾಂಪ್ರಮೈಸ್​ ಆಗುವುದಿಲ್ಲ. ಕಾಂಪ್ರಮೈಸ್​ ಆಗೋಕೂ ಬಂದಿಲ್ಲ. ನಾನು ಬಾಲಿವುಡ್ ಗೆ ಬಂದಿರೋದು ನನ್ನ ಕೆರಿಯರ್​ ಬೆಳೆಸಿಕೊಳ್ಳೋಕೆ ಎಂದು ನೇರವಾಗಿ ಹೇಳಿದ್ದೆ. ಇದರಿಂದ ಅನೇಕ ನಟರು ನನ್ನೊಂದಿಗೆ ನಟಿಸಲು ಹಿಂದೇಟು ಹಾಕಿದ್ದರು ಎಂದು ಮಲ್ಲಿಕಾ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article

ಸುರ