ಕುಮಾರಿ ಬಿಂದಿಯಾ ಶೆಟ್ಟಿ ರಾಷ್ಟ್ರೀಯ NSS ಪ್ರತಿಭಾನ್ವಿತ ಪ್ರಶಸ್ತಿಗೆ ಆಯ್ಕೆ
'ರಾಷ್ಟ್ರೀಯ ಸೇವಾ ಯೋಜನೆ'-NSSನಡಿ ನೀಡಲಾಗುವ ಅತ್ಯತ್ತಮ ಪ್ರತಿಭಾನ್ವಿತರಿಗಾಗಿ ನೀಡುವ ರಾಷ್ಟ್ರೀಯ ಪ್ರಶಸ್ತಿಗೆ ಸುರತ್ಕಲ್ ಗೋವಿಂದ ದಾಸ ಕಾಲೇಜ್ ನ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿನಿ ಕುಮಾರಿ ಬಿಂದಿಯಾ ಎಲ್ ಶೆಟ್ಟಿ ಭಾಜನರಾಗಿದ್ದಾರೆ.
ಸೆಪ್ಟೆಂಬರ್ 24ರಂದು ರಾಷ್ಟ್ರ ರಾಜಧಾನಿಯಲ್ಲಿ ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರಿಂದ ಕುಮಾರಿ ಬಿಂದಿಯಾ ಎಲ್ ಶೆಟ್ಟಿ ಈ ಮಹೋನ್ನತ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಕಟ್ಲ ಲೀಲಾಧರ ಶೆಟ್ಟಿ ಮತ್ರು ಸುಜಾತ ಶೆಟ್ಟಿ ದಂಪತಿಯ ಪುತ್ರಿಯಾಗಿರುವ ಈಕೆ SSLCಯಲ್ಲಿ ಹಾಗೂ PUCಯಲ್ಲಿ ರಾಜ್ಯದಲ್ಲೇ ಐದನೇ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದರು.
ಪ್ರಸ್ತುತ ಚಾರ್ಟೆರ್ಡ್ ಅಕೌಂಟೆಂಟ್ ಆಗಿ ವ್ಯಾಸಂಗ ಮಾಡುತ್ತಿರುವ ಬಿಂದಿಯಾ ಶೆಟ್ಟಿ ಅನೇಕ ಸಂಘ- ಸಂಸ್ಥೆಗಳಿಂದ ಪ್ರಶಸ್ತಿ ಪುರಸ್ಕಾರದ ಗೌರವಗಳನ್ನು ಪಡೆದಿದ್ದಾರೆ.
ಕುಮಾರಿ ಬಿಂದಿಯಾ 2020 ರಲ್ಲಿ ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್ ನಲ್ಲೂ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದರು.

