ಬೆಳ್ಳಾರೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಎಳೆದೊಯ್ಯಲು ಪರಿಚಿತನಿಂದಲೇ ಯತ್ನ- ಪ್ರಕರಣ ದಾಖಲು

ಮಂಗಳೂರು; ಯುವತಿಯೋರ್ವಳು  ಕೆಲಸ‌ ಮುಗಿಸಿ  ಮನೆಗೆ ನಡೆದುಕೊಂಡು ಹೋಗುವ ವೇಳೆ ಪರಿಚಿತ ವ್ಯಕ್ತಿಯೋರ್ವ ಆಕೆಯನ್ನು ಎಳೆದೊಯ್ಯಲು ಯತ್ನಿಸಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ನೊಂದ ಯುವತಿಯು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಕೆಲಸ ಮಾಡಿಕೊಂಡಿದ್ದು , ಎಂದಿನಂತೆ ಸಂಜೆ ಕೆಲಸ ಮುಗಿಸಿ ಬೆಳ್ಳಾರೆಯಿಂದ ಕಲ್ಮಡ್ಕ ಕಡೆಗೆ ಹೋಗುವ ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ತನ್ನ ಮನೆ ಕಡೆಗೆ ಹೋಗುತ್ತಿದ್ದರು.  

ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ  ಗಣೇಶ ಎಂಬ ಪರಿಚಯದ ವ್ಯಕ್ತಿ ಮುಪ್ಪೇರ್ಯ ಗ್ರಾಮದ ಇಂದ್ರಾಜೆ ಎಂಬಲ್ಲಿ ಯುವತಿ ಇಳಿಯುವ ಬಸ್ ಸ್ಟಾಪಿನಲ್ಲಿ ಇಳಿದಿದ್ದನು.  

ಇಂದ್ರಾಜೆಯಿಂದ ಜೋಗಿಬೆಟ್ಟು ಕಡೆಗೆ ಹೋಗುವ ರಸ್ತೆಯಲ್ಲಿ  ಯುವತಿ ಓರ್ವಳೇ ನಡೆದುಕೊಂಡು ಹೋಗುತ್ತಿದ್ಯಾಗ ಹಿಂದಿನಿಂದ ಹಿಂಬಾಲಿಸಿದ ಗಣೇಶನು ರಬ್ಬರ್‌ ಫಾಕ್ಷ್ಯರಿಗಿಂತ ಸ್ವಲ್ಪ ಮುಂಚೆ ತಲಪಿದಾಗ ಸಂಜೆ 7-15 ಗಂಟೆಗೆ ಯುವತಿಯ ಬಳಿ ಬಂದು ಅವರ ಬಾಯಿಯನ್ನು ಕೈಯಿಂದ ಅದುಮಿ ಹಿಡಿದು ರಸ್ತೆಯ ಬದಿಗೆ ಎಳೆದಿದ್ದಾನೆ.

 ಗಾಬರಿಗೊಂಡ ಯುವತಿ  ಕೊಸರಾಡಿ ಆತನ ಕೈಯಿಂದ ತಪ್ಪಿಸಿಕೊಂಡು ಪಕ್ಕದಲ್ಲಿಯೇ ವಾಸ್ತವ ಇರುವ ಮಾವನನ್ನು ಜೋರಾಗಿ ಕೂಗಿ ಕರೆದಿದ್ದಾಳೆ.  ಆರೋಪಿ ಗಣೇಶನು ಈ ವಿಚಾರವನ್ನು ಯಾರಿಯಾದರೂ ಹೇಳಿದರೆ ಮುಂದಕ್ಕೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂಬುದಾಗಿ  ಬೆದರಿಸಿ ಪರಾರಿಯಾಗಿದ್ದಾನೆ .

 ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಅ.ಕ್ರ 46/2021 ಕಲಂ : 354 ( D ) , 354 ( A ) , 506 ಐ.ಪಿ.ಸಿ. ಯಂತೆ ಪ್ರಕರಣ ದಾಖಲಾಗಿದೆ.