-->

ಕೊರೊನಾ ಬಳಿಕ ನಿತಿನ್ ಗಡ್ಕರಿ ಯೂಟ್ಯೂಬ್ ನಿಂದ ತಿಂಗಳಿಗೆ 4 ಲಕ್ಷ ರೂ. ಗಳಿಕೆ

ಕೊರೊನಾ ಬಳಿಕ ನಿತಿನ್ ಗಡ್ಕರಿ ಯೂಟ್ಯೂಬ್ ನಿಂದ ತಿಂಗಳಿಗೆ 4 ಲಕ್ಷ ರೂ. ಗಳಿಕೆ

ನವದೆಹಲಿ: ಕೊರೊನಾ ಸೋಂಕಿನ ಲಾಕ್ ಡೌನ್ ನಿಂದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡು ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಬಹಳಷ್ಟು ಮಂದಿ ಒಂದು ಹೊತ್ತಿನ ಊಟಕ್ಕೂ ಪರದಾಡಿದ ಉದಾಹರಣೆಗಳಿವೆ. ಆದರೆ ಕೇಂದ್ರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಪ್ರಾಧಿಕಾರ ಸಚಿವ ನಿತಿನ್​ ಗಡ್ಕರಿಯವರು ಲಾಕ್ ಡೌನ್ ಬಳಿಕ ಯೂಟ್ಯೂಬ್​ನಿಂದ ಪ್ರತಿ ತಿಂಗಳು 4 ಲಕ್ಷ ರೂ. ಸಂಪಾದನೆ ಮಾಡಿದ್ದಾರೆಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ದೆಹಲಿ-ಮುಂಬೈ ಎಕ್ಸ್​ಪ್ರೆಸ್​ ವೇ ಯೋಜನೆಯ ಪ್ರಗತಿ ಪರಿಶೀಲನೆಗೆಂದು ಹರಿಯಾಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಕೋವಿಡ್​ ಸಂದರ್ಭ ತಾನು ಯಾವ ರೀತಿ ಸಮಯದ ಸದುಪಯೋಗ ಮಾಡಿದೆ ಎಂಬುದರ ಬಗ್ಗೆ ಹೇಳಿಕೊಂಡರು.

ಕೊರೊನಾ ಕಾಲದಲ್ಲಿ ತಾನು ಮನೆಯಲ್ಲಿ ಅಡುಗೆ ಮಾಡುವುದು ಹಾಗೂ ವೀಡಿಯೋ ಕಾನ್ಪರೆನ್ಸ್ ಮೂಲಕ ಉಪನ್ಯಾಸ ನೀಡುತ್ತಿದ್ದೆ. ಈ ​ಆನ್​ಲೈನ್ ಉಪನ್ಯಾಸಗಳನ್ನು ಯೂಟ್ಯೂಬ್​ನಲ್ಲಿ ಅಪ್ಲೋಡ್ ಮಾಡುತ್ತಿದೆ. ಅದಕ್ಕೆ ನೆಟ್ಟಿಗರಿಂದ ಭಾರಿ ಬೆಂಬಲ ವ್ಯಕ್ತವಾಯಿತು. ಬಹಳಷ್ಟು ಜನರು ಈ ಭಾಷಣಗಳನ್ನು ವೀಕ್ಷಿಸಲು ತೊಡಗಿದರು.‌ ಇದರಿಂದ ಯೂಟ್ಯೂಬ್ ನನಗೆ ಪ್ರತಿ ತಿಂಗಳು 4 ಲಕ್ಷ ರೂ. ಪಾವತಿ ಮಾಡುತ್ತಿದೆ ಎಂದು ಹೇಳಿದರು.

Ads on article

Advertise in articles 1

advertising articles 2

Advertise under the article